ಅಮರಾವತಿ: ರಝಾಕರ ಹತ್ಯೆಯಿಂದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ತಾಯಿ ಮತ್ತು ತಂಗಿಯನ್ನು ಕಳೆದುಕೊಂಡಿದ್ದಾರೆ ಆದರೆ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಸತ್ಯವನ್ನು ಮರೆಮಾಚುತ್ತಿದ್ದಾರೆ ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮ ವೈಯಕ್ತಿಕ ಬದುಕಿನ ನೋವನ್ನು ಮನಸ್ಸಲ್ಲಿಟ್ಟುಕೊಂಡಿದ್ದಾರೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಆರೋಪಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನನ್ನ ಮೇಲೆ ಅನಗತ್ಯವಾಗಿ ಕೋಪಮಾಡಿಕೊಳ್ತಾರೆ. ನಾನು ಅವರನ್ನು ಅವರ ವಯಸ್ಸನ್ನು ಗೌರವಿಸುತ್ತೇನೆ.ಅವರು ನನ್ನ ಮೇಲೆ ಕೋಪ ಮಾಡಿಕೊಳ್ಳುವ ಬದಲು ಹೈದರಾಬಾದ್ ನಿಜಾಮನ ಮೇಲೆ ತೋರಿಸಿ ಅವರನ್ನು ಒಡಿಸಬೇಕು ಎಂದುವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್ ನಿಜಾಮನ ಸೇನಾಪಡೆಯಾದ ರಜಾಕರು ಮಲ್ಲಿಕಾರ್ಜುನ ಖರ್ಗೆಯವರ ಗ್ರಾಮವಾದ ವರವಟ್ಟಿಯನ್ನು ಭಸ್ಮ ಮಾಡಿದ್ದಾರೆ.ಆ ದಾಳಿಯಲ್ಲಿ ಝರ್ಗೆಯವರ ತಾಯಿ ಹಾಗೂ ಸಹೋದರಿ ಸಾವನ್ನಪ್ಪಿದ್ದಾರೆ.ನಿಜಾಮ ಸೈನಿಕರ ದಾಳಿಯ ಬಗ್ಗೆ, ದೌರ್ಜನ್ಯದ ಬಗ್ಗೆ ಮಾತನಾಡಿದರೆ ಮುಸ್ಲೀಮರ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಆ ಸತ್ಯವನ್ನು ತಮ್ಮೊಳಗೆ ಅಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
1946ರಲ್ಲಿ ಮುಸ್ಲೀಂ ಲೀಗ್‌ನೊಂದಿಗೆ ಒಪ್ಪಂದ ಮಾಡಿಕೊಳಡಿರುವ ಪರಿಣಾಮ ದೇಶ ಸಪರೇಟ್ ಆಯ್ತು. ಹಾಗೂ ಹಿಂದೂಗಳ ಮಾರಣ ಹೋಮವಾಯಿತು ಎಂದು ಅರೋಪ ಮಾಡಿದ್ದಾರೆ. ʼನಮ್ಮ ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಮ್ಮ ಹೆಣ್ಣುಮಕ್ಕಳಿಗೆ ಸುರಕ್ಷತೆಯಿರುವುದಿಲ್ಲʼ ನಮ್ಮ ದೇವಾಲಯಗಳ ಮೇಲೆ ದಾಳಿ ನಡೆಸಿ ದ್ವಂಸ ಮಾಡಿ, ನಮ್ಮ ಸಮುದಅಯವನ್ನು ಟಾರ್ಗೆಟ್ ಮಾಡ್ತಾರೆ ಎಂದು ಹೇಳಿದ್ದಾರೆ.