ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವ ಡಾಲಿ ದನಂಜಯ್ ತಮ್ಮ ಬ್ಯಾಚುಲರ್ ಲೈಫಿಗೆ ಗುಡ್ ಬೈ ಹೇಳ್ತಿದ್ದಾರೆ. ಏಕೆಂದರೆ ಡಾಲಿ ಧನಂಜಯ್ ಹಸೆಮಣೆಯನ್ನು ಏರಲು ಸಜ್ಜಾಗಿದ್ದಾರೆ.
ಯಾವ ಕಾರ್ಯಕ್ರಮಗಳಿಗೂ ಹೋದರೂ ಮದುವೆ ಪ್ರಶ್ನೆ ಎದುರಾಗುತ್ತಿತ್ತು.ಆದರೆ ಇದೀಗ ದೀಪಾವಳಿ ಹಬ್ಬಕ್ಕೆ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿ ಎದುರಾಗಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ನೀಡಿದ್ದಾರೆ.
ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು ನಾನು ಧನ್ಯ ಎಂದು ಧನಂಜಯ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದು, ತನ್ನ ಸಂಗಾತಿಯೊಂದಿಗೆ ನಾಡ ಕವಿ ಬೇಂದ್ರೆಯವರ ಕವನವನ್ನು ವಾಚಿಸುವ ವಿಡಿಯೋವೊಂದನ್ನುಹಂಚಿಕೊಂಡಿರುವ ಡಾಲಿ.ತನ್ನ ಕೈ ಹಿಡಿಯಲಿರುವ ಸಂಗಾತಿಯನ್ನು ಪರಿಚಯಿಸಿದ್ದಾರೆ.
ಇವರಿಬ್ಬರ ಮದುವೆ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ