ಬೆಂಗಳೂರು: ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದು, ಇದೀಗ ಅವರ ಗನ್‌ಮ್ಯಾನ್‌ಗಾಗಿ ಎಸ್.ಐ.ಟಿ ತೀವ್ರ ಶೋಧ ನಡೆಸುತ್ತಿದೆ.
ಬೆಂಗಳೂರಿನ ಸಿಂಗನಾಯಕನಹಳ್ಳಿಯಲ್ಲಿ 4 ವರ್ಷಗಳಿಂದಲೂ ದೊಡ್ಡ ಮನೆಯಲ್ಲಿ ಐಶಾರಾಮಿ ಬದುಕು ನಡೆಸುತ್ತಿರುವ ಮುನಿರತ್ನರ ಗನ್‌ಮ್ಯಾನ್ ಶ್ರೀನಿವಾಸ್, ಸಂತ್ರಸ್ಥೆಯನ್ನು ಪಿಕಪ್ ಮತ್ತು ಡ್ರಾಪ್ ಮಾಡಿರುವ ಆರೋಪದ ಶಂಕೆಯಿರುವ ಹಿನ್ನೆಲೆ ಶೋಧ ನಡೆಸಲಾಗುತ್ತಿದೆ.
ಸಿಂಗನಾಯಕನಹಳ್ಳಿಯಲ್ಲಿರುವ ಶ್ರೀನಿವಾಸ್ ಮನೆಯನ್ನು ಎಸ್.ಐ.ಟಿ. ಶೋಧ ನಡೆಸುತ್ತಿದ್ದು, ಸದ್ಯ ಆರೋಪಿಯು ತಲೆಮರೆಸಿಕೊಂಡಿರುವುದರಿಂದ ಕುಟುಂಬದವರಿಂದ ಮಾಹಿತಿಯನ್ನು ಪಡೆದುಕೊಂಡಿರುವುದು ತಿಳಿದುಬಂದಿದೆ.