ದಕ್ಷಿಣ ಆಫ್ರಿಕಾದಲ್ಲಿ ಇಂದು ನಡೆದ ಹತ್ತೊಂಬತ್ತು ವರ್ಷದೊಳಗಿನ T20 ವಿಶ್ವಕಪ್ ಮಹಿಳಾ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೊಟ್ಟಮೊದಲ ವಿಶ್ವಕಪ್ ಎತ್ತಿ ಹಿಡಿದಿದೆ.
ಮೊದಲ ICC U-19 ಮಹಿಳಾ T20 ವಿಶ್ವಕಪ್ ಫೈನಲ್ನಲ್ಲಿ ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿ ಭರ್ಜರಿ ಜಯವನ್ನ ಸಾಧಿಸಿದ್ದಾರೆ. ಫೈನಲ್ನಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಶಫಾಲಿ ನೇತೃತ್ವದ ಟೀಂ ಇಂಡಿಯಾ 17.1 ಓವರ್ಗಳಲ್ಲಿ 68 ರನ್ಗಳಿಗೆ ಇಂಗ್ಲೆಂಡ್ ಆಟಗಾರ್ತಿಯರಿಗೆ ಪೆವಿಲಿಯನ್ ಹಾದಿ ತೋರಿಸಿ, ಅಲ್ಪ ಮೊತ್ತಕ್ಕೆ ಕಟ್ಟಿಹಾಕಿತು.
ಭಾರತದ ಬೌಲಿಂಗ್ ಪಡೆ ಅಕ್ಷರಶಃ ಅಬ್ಬರಿಸಿದರು. ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಹಂಚಿಕೊಂಡು, ಆರು ವಿಕೆಟ್ಗಳನ್ನು ಪಡೆದರೆ, ಇನ್ನೂ ನಾಲ್ಕು ಆಟಗಾರ್ತಿಯರು ತಲಾ ಒಂದೊಂದು ವಿಕೆಟ್ಗಳನ್ನು ಪಡೆದರು. ಇವರಂತೆಯೇ ಇಂಗ್ಲೆಂಡ್ ತಂಡವೂ ಆಕರ್ಷಕ ಪ್ರದರ್ಶನವನ್ನ ನೀಡಿದೆ.
ಕಡಿಮೆ ಸ್ಕೋರನ್ನು ರಕ್ಷಿಸಿಕೊಳ್ಳುವ ಸಲುವಾಗಿ ಇಂಗ್ಲೆಂಡ್ ಆರಂಭದಲ್ಲಿ ನಾಯಕಿ ಶೆಫಾಲಿ ಮತ್ತು ಶ್ವೇತಾಸೆಹ್ರಾವತ್ ಅವರ ವಿಕೆಟ್ಗಳನ್ನು ಪಡೆದರೂ ಭಾರತದ ಗೆಲುವನ್ನು ತಡೆಹಿಡಿಯುವಲ್ಲಿ ವಿಫಲವಾಗಿ, ಸೋಲೊಪ್ಪಿಕೊಳ್ಳಬೇಕಾಯಿತು. ಈ ಮೂಲಕ ಭಾರತ 7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ವಿಶ್ವಕಪ್ನೊಂದಿಗೆ ಭಾರತಕ್ಕೆ ಬರಲಿದ್ದಾರೆ. ಇದೇ ತಂಡದ ಅನೇಕ ಆಟಗಾರ್ತಿಯರು ಮುಂದಿನ ತಿಂಗಳು ಆರಂಭವಾಗುವ ಮಹಿಳಾ T20 ವಿಶ್ವಕಪ್ನಲ್ಲಿ ಆಡಲಿದ್ದಾರೆ.