ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವೂ 2 ಚಿನ್ನದ ಪಧಕವನ್ನು ಪಡೆದುಕೊಂಡಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್ ಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಈ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ನ ಡ್ಯಾನಿಯೆಲ್ ಬೆಥೆಲ್ ಅವರನ್ನು 2-1 ಅಂತರದಿಂದ ಸೋಲಿಸಿ ರೋಚಕ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್ನಲ್ಲಿ 9ನೇ ಪದಕ ಪಡೆದುಕೊಂಡು ಒಲಿಂಪಿಕ್ಸ್ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ.