ನವದೆಹಲಿ: ಭಾರತದ ಅಭಿವೃದ್ದಿಯನ್ನು ನೋಡಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬದುಕಿರಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಜಮ್ಮು ಚುನಾವಣಾ ಪ್ರಚಾರದ ಸಮಯದಲ್ಲಿ ಅಸ್ವಸ್ಥರಾಗಿದ್ದ ಖರ್ಗೆಯವರು ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾನು ಸಾಯುವುದಿಲ್ಲ.ಎಂಬ ಹೇಳಿಕೆಗೆ ಅಮಿತ್ ಶಾ ತಿರುಗೇಟನ್ನು ನೀಡಿದ್ದಾರೆ.
ಪ್ರಧಾನಿ ಮೋದಿಯವರ ಬಗ್ಗೆ ಖರ್ಗೆಯವರು ತುಂಬಾ ಕೆಟ್ಟದ್ದಾಗಿ ಮಾತನಾಡಿದ್ದು, ವೈಯಕ್ತಿಕ ವಿಚಾರಗಳಿಗೆ ಪ್ರಧಾನಿಯವರನ್ನು ಮುನ್ನಲೆಗೆ ತಂದಿದ್ದಾರೆ ಎಂದರೆ ಪ್ರಧಾನಿಯವರ ಮೇಲೆ ಖರ್ಗೆಯವರಿಗೆ ಎಷ್ಟು ದ್ವೇಷವಿರಬೇಕು ಎಂಬುದನ್ನು ತೋರಿಸಿದ್ದಾರೆ.
ಖರ್ಗೆಯವರಿಗೆ ದೇವರು ದೀರ್ಘ ಆಯಸ್ಸುಕೊಡಲಿ, ಅವರು ಬೇಗ ಸುಧಾರಿಕೊಳ್ಳಿ ಎಂದು ಮೋದಿಯವರು ಮತ್ತು ನಾನು ಪ್ರಾರ್ಥನೆ ಮಾಡುತ್ತೇವೆ.2047ರ ಅಭಿವೃದ್ದಿ ಹೊಂದಿದ ಭಾರತವನ್ನು ನೋಡಲು ಬದುಕಿರಲಿ ಎಂದಿದ್ದಾರೆ.