ಊಟ ಬೇಕಾದರೆ “ಜೈ ಶ್ರೀರಾಮ್” ಹೇಳಿ ಎಂದು ಊಟ ವಿತರಕನು ಒತ್ತಾಯ ಮಾಡಿರುವ ಘಟನೆಯು ಮುಂಬೈನ ಟಾಟಾ ಆಸ್ಪತ್ರೆಯ ಆವರಣದ ಎದುರು ನಡೆದಿದ್ದು ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಸಹಾಯವನ್ನು ನಿರೀಕ್ಷಸುವ ವ್ಯಕ್ತಿಗಳ ಮೇಲೆ ಧಾರ್ಮಿಕತೆಯನ್ನು ಹೇರುವ ಪ್ರಯತ್ನ ಎಂದು ಹಲವರು ಭಾವಿಸಿದ್ದಾರೆ.ಆಸ್ಪತ್ರೆಯ ಹೊಭಾಗದಲ್ಲಿ ಚಿತ್ರವಾದ ವಿಡಿಯೋದಲ್ಲಿ ಹಿಜಾಬ್ ಧರಿಸಿರುವ ಮಹಿಲೆ ಉಟಕ್ಕಾಗಿ ಕಾಯುತ್ತಿರುವಾಗ ಊಟ ವಿತರಕ್ “ನೀವು ಜೈ ಶ್ರೀರಾಮ್ “ ಹೇಳಿದ್ರೆ ಮಾತ್ರ ನಿಮಗೆ ಊಟ ನೀಡುತ್ತೇನೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಚಾರವೂ ಚರ್ಚೆಗೆ ಗ್ರಾಸವಾಗಿದ್ದು, ದ್ವೇಷ ಮತ್ತು ತಾರತಮ್ಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.