ವಿಜಯನಗರ: ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಮಾಡಿದರೆ ಬಿಜೆಪಿ ಉಳಿಯುತ್ತದೆ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಯತ್ನಾಳ್ , ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ರೂಗಳನ್ನು ತಿಂದು ತೆಗಿದ್ದಾರೆ. ಅವರನ್ನು ಯಾವುದೇ ಕಾರ್ಯಕ್ರಮಗಳ ವೇದಿಕೆಯಲ್ಲಿ ಕೂರಿಸಬಾರದು. ವಿಜಯೇಂದ್ರನನ್ನುರಾಜ್ಯಾಧ್ಯಕ್ಷ ಸ್ಥಾನದಿಂ ವಜಾಮಾಡಿದರೆ ಬಿಜೆಪಿ ಉಳಿಯುತ್ತದೆ ಎಂದಿದ್ದು, ವಿಜಯೇಂದ್ರ ನನ್ನನು ಸ್ಟಾರ್ ಆಗಿ ಮಾರ್ಪಡಿಸುವ ಅವಶ್ಯಕತೆಯಿಲ್ಲ. ನಾನಾಗಲೇ ಜನರ ಮನಸಸ್ಸಲ್ಲಿ ಸ್ಟಾರ್ ಆಗಿದ್ದೇನೆ ನೀವು ಹೀರೋ ಆಗ್ಬೇಕಾದರೆ ದುಡ್ಡು ಖರ್ಚು ಮಾಡಬೇಕಾಗ್ತದೆ.
ʼಬಿವೈವಿ ಕರ್ನಾಟಕʼ ಮಾಡಿದರೆ ಒಳ್ಳೆಯದು.ಬಿಜೆಪಿ ಎಕ್ಸ್ ಖಾತೆಯಲ್ಲಿ ಬಿಎಸ್‌ವೈ ಜಪ ಮಾಡುತ್ತಿರುತ್ತಾರೆ ಎಂದಿದ್ದಾರೆ. ಬಿಎಸ್‌ವೈ ಸಿಎಂ ಆಗಿದ್ದಾಗ ನನ್ನನ್ನು ಮತ್ರಿಯಾಗು ಎಂದು ಹೇಳಿದ್ದರು. ಆದ್ರೆ ನಾನಾಗಲಿಲ್ಲ.ಬಿಎಸ್‌ವೈ ಸಿಎಂ ಆಗಿದ್ದಾಗ 1000 ಕೋಟಿ ತಿಂದು ತೆಗಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮಂಡಲದಲ್ಲಿ ನಾನು ಇರುವುದಿಲ್ಲವೆಂದು ಹೇಳಿದ್ದೇ ಆದ್ದರಿಂದ ಪ್ರತಿನಿತ್ಯ ಅಪ್ಪ ಮಗ ಜೆಪಿ ನಡ್ಡಾರವರ ಹತ್ತಿರ ಹೋಗಿ ಅವರನ್ನು ತೆಗೆದುಹಾಕಿ ಎಂದು ಗೋಲೀಡುತ್ತಿದ್ದರುಎಂದು ವ್ಯಂಗ್ಯವಾಡಿದ್ದಾರೆ.