ಬೆಂಗಳೂರು: ಪ್ರತಿಯೊಂದು ವಾಹನಗಳಿಗೂ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆಸಬೇಕೆಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿತ್ತು. ಈ ನಿಯಮವನ್ನುಪಾಲಿಸದಿದ್ದರೆ ದಂಡ ಕಟ್ಟುವುದಕ್ಕೆ ರೆಡಿಯಾಗಿ ಎನ್ನಲಾಗಿತ್ತು. ಆದರೇ ಈದೀಗ ವಾಹನ ಸವಾರರಿಗೆ ರಿಲೀಫ್ ಸಿಕ್ಕಿದೆ. ಅದೇನೆಂದರೆ ನವೆಂಬರ್ ತಿಂಗಳ20 ನೇ ತಾರೀಖಿನವರೆಗೆ ಹೆಚ್. ಎಸ್ .ಆರ್ .ಪಿ .ನಂಬರ್ ಪ್ಲೇಟ್ ನ್ನು ಅಳವಡಿಸಲು ಹೈಕೋರ್ಟ್ ನೀಡಿದ ಗಡುವನ್ನು ಹೆಚ್ಚಿಸಿದೆ.
ಹೆಚ್ ಎಸ್ ಆರ್ ಪಿ (ಅತಿ ಸುರಕ್ಷಿತ ನೋಂದಣಿ ಫಲಕ) ನಂಬರ್ ಪ್ಲೇಟ್ಗಳ ಅಳವಡಿಕೆಗೆ ಹೆಚ್ಚು ಕಾಲಾವಕಾಶ ನೀಡುವಂತೆ ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟಗೆ ಅರ್ಜಿಯನ್ನುಸಲ್ಲಿಸಿದ್ದರು. ಆ ಮನವಿಯನ್ನು ಪರಿಗಣಿಸಿದಂತಹ ನ್ಯಾಯಾಲಯವು ವಿಚಾರಣೆಯನ್ನ ಮುಂದೂಡಿ ನಂಬರ್ ಪ್ಲೇಟ್ ಅಳವಡಿಸಲು ನೀಡಿದ ಗಡುವನ್ನು ವಿಸ್ತರಿಸಿದೆ.