ಪ್ರತಿಯೊಬ್ಬರು ಅನ್ನ ಮಾಡಬೇಕಾದ್ರೆ ಅಕ್ಕಿಯನ್ನು ಎರಡು ಸಲ ತೊಳೆದೇ ತೊಳೆಯುತ್ತಾರೆ, ಹೀಗೆ ಅಕ್ಕಿ ತೊಳೆದ ನೀರನ್ನು ಹೊರಗೆ ಚೆಲ್ಲುತ್ತಾರೆ ಹೀಗೆ ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನ ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿ .
ಈ ಅಕ್ಕಿ ತೊಳೆದಿರುವ ನೀರಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನ ತಿಳಿಯೋಣ
ಅಕ್ಕಿ ತೊಳೆದಿರುವ ನೀರಿನಲ್ಲಿ ವಿಟಮಿನ್,ಪ್ರೋಟಿನ್, ಖನಿಜಾ,ಆಂಟಿ ಆಕ್ಸಿಡೆಂಟ್ ರೀತಿಯ ಹಲವು ಅಂಶಗಳಿವೆ.
ಅಕ್ಕಿ ತೊಳೆದಿರುವ ನೀರನ್ನು ವೇಸ್ಟ್ ಮಾಡದೇ ನಮ್ಮ ಮನೆಯ ಅಂಗಳದಲ್ಲಿರುವ ಸಸಿಗಳಿಗೆ ಹಾಕಿದರೆ ಅದಕ್ಕೆ ಬೇಕಾದ ಅಂಶಗಳು ದೊರೆತು ಸಸಿಗಳು ಸೊಂಪಾಗಿ ಬೆಳೆಯುತ್ತವೆ.
ಅಕ್ಕಿ ತೊಳೆದಿರುವ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದಲ್ಲದೆ ಹೊಳಪನ್ನು ಹೆಚ್ಚಿಸುತ್ತದೆ.
ಅಕ್ಕಿ ತೊಳೆದಿರುವ ನೀರಿನಿಂದ ಮುಖ ತೊಳೆದುಕೊಂಡರೆ ಮೃದುವಾಗಿ ಕಾಂತಿಯುತವಾಗುತ್ತದೆ.
ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ತಂಪಾಗಿಡುತ್ತದೆ.
ಸೂರ್ಯನ ಕಿರಣಗಳಿಂದ ಉಂಟಾಗಿರುವ ಮುಖದ ಮೇಲಿನ ಕಲೆಗಳನ್ನು ಕೂಡಾ ಕಡಿಮೆ ಮಾಡುತ್ತದೆ.
ಹೆಣ್ಣುಮಕ್ಕಳು ಅನುಭವಿಸುವ ಬಿಳಿಸೆರಗಿನ ಸಮಸ್ಯೆಯನ್ನು ಕೂಡಾ ನಿವಾರಣೆ ಮಾಡುತ್ತದೆ.
ಜ್ವರ, ನೆಗಡಿ,ಕೆಮ್ಮಿನಂತಹ ಶೀತದ ಸಮಸ್ಯೆಗಳಿಗೂ ರಾಮಬಾಣವಾಗಿದೆ.