ಬೆಂಗಳೂರು: ಹರಿಯಾಣದ ಚುನಾವಣೆಯ ಮೊದಲ ಹಂತದಲ್ಲಿ ಹಿನ್ನಡೆಯನ್ನೂ ಕಂಡರೂ ಮುಂದಿನ ಸುತ್ತುಗಳಲ್ಲಿ ಬಿಜೆಪಿಯು ಮುನ್ನಡೆಯನ್ನು ಸಾಧಿಸಿ ಗೆಲುವನ್ನು ಪಡೆಯುತ್ತದೆ ಎಂದು ವಿಧಾಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಜುಮ್ಮು-ಕಾಶ್ಮೀರಾದಲ್ಲಿ ಬಿಜೆಪಿಯು 28ರಿಂದ 32 ಸ್ಥಾನಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆಯೂ ತಿಳಿಸಿತ್ತು. ಆದರೆ ಅಲ್ಲಿ ಕಾಂಗ್ರೆಸ್ಸಿನ ಫಾರ್ಮುಲಾದ ಪ್ರಭಾವ ಹೆಚ್ಚಿರುವುದರಿಂದ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಇದೇ ಫೈನಲ್ಅಲ್ಲ, ನೋಡೋಣ ಫಲಿತಾಂಶ ಏನಾಗುತ್ತದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೂ ಭ್ರಷ್ಟ ರಾಜಕಾರಣ ಮಾಡುತ್ತಾ ಹಗರಣಗಳಲ್ಲೇ ಮುಳುಗಿಹೋಗಿದೆ.ಆದರೆ ಬಿಜೆಪಿಯವರು ಹರಿಯಾಣದಲ್ಲಿ ಹಗರಣಗಳಲ್ಲಿ ಮುಳುಗೇಳುವ ಕೆಲಸವನ್ನು ಮಾಡಿಲ್ಲ, ಈ ಬಾರೀ ಜಮ್ಮು-ಕಾಶ್ಮೀರಾದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆ ನಡೆದಿದೆ.ನೋಡೋಣ ಮತದಾನ ಪ್ರಭುಗಳು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯನ್ನಿಟ್ಟು ನಮ್ಮ ಜೊತೆ ನಿಲ್ಲುತ್ತಾರೋ? ಅಥವಾ ಭಯೋತ್ಪಾದಕರಾದ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರಾ? ಎನ್ನುವುದನ್ನು ಕಾದುನೋಡಬೇಕಿದೆ ಎಂದಿದ್ದಾರೆ.