ಹೀಗೆ ಒಮ್ಮೆ ಒಂದು ಯೋಚ್ನೆ ಬಂದಿತ್ತು ಬೆಳಕರಿಯೋ ಹೊತ್ತಿಗೆ Google ಇಲ್ಲ ಅಂದ್ರೆ ಹೇಗಿರುತ್ತೆ ಅಂತ… ಇದು ಹೇಗ್ ಇರಬಹುದು ಅಂತ ಕೊನೆಗೆ ಗೂಗಲ್ ನೆ ಕೇಳ್ ಬೇಕಾಯಿತು. ಅಷ್ಟರ ಮಟ್ಟಿಗೆ ಗೂಗಲ್ ನಮ್ಮ ದಿನ ನಿತ್ಯದ ಆಗು ಹೋಗುಗಳಲ್ಲಿ ಅವಿಭಾಜ್ಯ ಅಂಗವಾಗಿದೆ. ನಾನ್ ಅಂತೂ ಡಾಕ್ಟರ್ ಕೊಡೋ prescriptionನು ಕೂಡ ಗೂಗಲ್ ಮಾಡಿ side effects ಗಳ ಬಗ್ಗೆ ವಿಚಾರಿಸಿ doctorಗಳ ತಲೆ ತಿಂದು ಬೈಸ್ಕೊಂಡಿದ್ ಇದೆ.

Google 25

ಮಕ್ಕಳ ಹೋಂ ವರ್ಕ್ ನಿಂದ ಹಿಡಿದು, google scholarನ white paperಗಳ ವರೆಗೂ, ಅಡುಗೆ recipe ಗಳಿಂದ ಹಿಡಿದು ಕಾರ್ ಟೈರ್ ಬದಲಾಯಿಸುವವರೆಗೂ ಏನೆಲ್ಲಾ ಸಿಗುತ್ತೆ ಗೂಗಲ್ ನಲ್ಲಿ. ಇನ್ನ ಗೂಗಲ್ ಮ್ಯಾಪ್, ಗೂಗಲ್ ಟ್ರಾನ್ಸ್ಲೇಟರ್, ಗೂಗಲ್ ಡ್ರೈವ್ ಇವ್ಯಾವೂ ಇಲ್ದೆ ನಮಗಂತೂ ಹೊತ್ತು ಹುಟ್ಟಿಸೋದಕ್ಕು, ಕಳೆಯೋದಕ್ಕು ಸಾಧ್ಯಾನೇ ಇಲ್ಲ ಬಿಡಿ.

ವಿಶ್ವದ ನಂಬರ್ ಒನ್ search engine ಅಗಲು ಗೂಗಲ್ ಸವೆಸಿದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ.

1995ರಲ್ಲಿ Stanford ವಿಶ್ವವಿದ್ಯಾಲಯದಲ್ಲಿ PhD ಮಾಡುತ್ತಿದ್ದ ಲ್ಯಾರಿ ಪೇಜ್ ಮತ್ತು ಸರ್ಗೆಯ್ ಬ್ರಿನ್ ಎಂಬ ಇಬ್ಬರು ಮಿತ್ರರು ವೆಬ್‌ಸೈಟ್ ಅನ್ನು ಶ್ರೇಣೀಕರಿಸಲು ಹೊಸ ವಿಧಾನಗಳ ಪ್ರೊಜೆಕ್ಟ್ ಮೇಲೆ ಕೆಲ್ಸ ಮಾಡ್ತಾ ಇರ್ತಾರೆ. ಆಗ ಹುಟ್ಟಿದ್ದೇ ಗೂಗಲ್. ಶುರುವಿನಲ್ಲಿ ಇಬ್ರೂ ಸೇರಿ “BackRub” ಎನ್ನುವ search engine ಅನ್ನು ಪ್ರಾರಂಭಿಸುತ್ತಾರೆ. ನಂತರ ಇದೇ search engine ನ ಹೆಸರು 1997 ರಲ್ಲೀ Google ಆಗಿ ಬದಲಾಯಿತು. 1998ರ ಈ ದಿನ ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್, ನ ಗ್ಯಾರೇಜ್ ನಲ್ಲಿ ಗೂಗಲ್ ಅಧಿಕೃತವಾಗಿ ಪ್ರಾರಂಭವಾಯ್ತು.

2015ರಲ್ಲಿ ಗೂಗಲ್ Alphabet.Inc ಎಂಬ ಹೊಸ ಹೋಲ್ಡಿಂಗ್ ಕಂಪನಿ ಆಗಿ re-structure ಆಯ್ತು. Alphabet ಅನ್ನು Google ತನ್ನ ಮೂಲ ವ್ಯವಹಾರಗಳ ಮೇಲೆ ಕೇಂದ್ರೀಕರಿಸಲು ಅವಕಾಶ ನೀಡಲು ರಚಿಸಲಾಯಿತು. Alphabet ಹಲವಾರು ಅಂಗಸಂಸ್ಥೆಗಳನ್ನು ಹೊಂದಿದೆ, ಇದರಲ್ಲಿ Google, Calico, CapitalG, DeepMind, GV, Intrinsic, Loon, Nest, Verily, Waymo ಮತ್ತು X Development ಸೇರಿವೆ. ಈ ಅಂಗಸಂಸ್ಥೆಗಳು ಹೊಸ ವೈದ್ಯಕೀಯ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವುದು, ಸ್ವಯಂ ಚಾಲನಾ ಕಾರುಗಳನ್ನು ರಚಿಸುವುದು ಮತ್ತು ಇಂಟರ್ನೆಟ್ ಅನ್ನು ಪ್ರವೇಶಿಸಲು ಹೊಸ ಮಾರ್ಗಗಳನ್ನು ನಿರ್ಮಿಸುವುದು ಸೇರಿದಂತೆ ವಿಶಾಲ ಶ್ರೇಣಿಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

Google

ಅಂದಹಾಗೆ Google ಅಂದ್ರೆ, ಗಣಿತ ಶಾಸ್ತ್ರದಲ್ಲಿ ಬರುವ “googol” ನ tweeked form. Googol ಅಂದ್ರೆ, 1 ರ ಮುಂದೆ 100 ಸನ್ನೆಗಳನ್ನು ಸೇರಿಸಿದಾಗ ಬರುವ ಸಂಖ್ಯೆ!!!

ಹಾಗಂತ Google ನಾವು ಕೇಳಿದ್ದನ್ನೆಲ್ಲ ಕೊಡಲ್ಲ.

ಈಗ್ಗೆ ಕೆಲ ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡ್ಕೊಳೋದರ ಬಗ್ಗೆ ಗೂಗಲಿಸಿದಾಗ ಗೂಗಲ್ help line number ಗಳನ್ನ, motivational videoಗಳನ್ನ search resultsನಲ್ಲಿ ಕೊಟ್ಟಿದ್ದು ಸುದ್ದಿಯಾಗಿತ್ತು.

ಹಾಗೇ ನಾವು search ಮಾಡೋದೆಲ್ಲ ಗೂಗಲ್ ಮರೆಯೋ ಅಂತ ಆಸಾಮಿ ಅಲ್ವೇ ಅಲ್ಲ… ಈಗ ನೀವು ಬೆಸ್ಟ್ ಹೋಟೆಲ್ಸ್ ಇನ್ ಗೋವಾ ಅಂತ ಟೈಪ್ ಮಾಡಿ, ನಿಮ್ ಮೊಬೈಲ್ ತುಂಬಾ ಇನ್ನ ಒಂದು ತಿಂಗಳು ಬರೀ make my trip ಮತ್ತೆ trivago ಗಳ adಗಳೇ ತುಂಬಿರುತ್ತೆ. ಒಂದ್ ತರ ಪಕ್ಕದ್ ಮನೆ ಆಂಟಿ – ಅಂಕಲ್ ರ ಹಾಗೆ ಈ ಗೂಗಲ್.

2004 ರ ಹೊತ್ತಿಗೆ google, yaahoo ಮತ್ತಿತರೆ search engine ಗಳನ್ನ ಹಿಂದಿಕ್ಕಿ ಮುಂಚೂಣಿಗೆ ಬಂತು.

Google ಎಲ್ಲರಿಗೂ ಆಪ್ತ ವಾಗಿದ್ದು ನಿರಂತರವಾಗಿ ತನ್ನ UI ಅನ್ನ improve ಮಾಡೋದರ ಮೂಲಕ. ಮತ್ತು ಗೂಗಲ್ ಡೂಡಲ್ ಗಳ ಮೂಲಕ. ದಿನ ಬೆಳಗಾದರೆ ಗೂಗಲ್ ಆ ದಿನದ ವಿಶೇಷವನ್ನು ಡೂಡಲ್ ಗಳ ಮೂಲಕ ಸೆಲೆಬ್ರೇಟ್ ಮಾಡುತ್ತೆ. ಮತ್ತು ಡೂಡಲ್ ಗಳ ಮೂಲಕ ವಿಷಯಗಳನ್ನ, ಇತಿಹಾಸವನ್ನ ಜನರಿಗೆ ತಲುಪಿಸುತ್ತದೆ.

  • 2017 ರಲ್ಲಿ ಡಾ ರಾಜ್ ಕುಮಾರ್ ಮತ್ತು ಕುವೆಂಪು ಅವರ ಹುಟ್ಟು ದಿನಕ್ಕೆ ಮುದ್ದಾದ doodleಗಳ ಮೂಲಕ ಅಭಿಮಾನಿಗಳ ಜೊತೆ ತಾನೂ ಸಂಭ್ರಮಿಸಿದ್ದು ಇಲ್ಲಿ ಸ್ಮರಿಸಬಹುದು.
  • Google ಮತ್ತೂ ಮುಂದುವರೆದು ಈಗ ನಮ್ಮೆಲ್ಲರ ಹುಟ್ಟು ದಿನಕ್ಕೆ ಸ್ಪೆಷಲ್ ಡೂಡಲ್ ಮೂಲಕ ನಮ್ಮ ಸಂಭ್ರಮದಲ್ಲು ಭಾಗಿ ಆಗುತ್ತೆ.
  • Google ನ ಈ ಸಣ್ಣ ಸಣ್ಣ gestureಗಳೇ ಇದರ ಇಂದಿನ ರೀಚ್ ಗೆ ಕಾರಣ ಆಗಿದ್ದು.
  • ನಿರಂತರವಾಗಿ ಹೊಸತನ್ನು ಹುಡುಕುತ್ತಾ innovative ಆಗಿ ಹೊಸ ಹೊಸ products and services ಗಳನ್ನ ಕೊಡ್ತಾ ಗೂಗಲ್ ಇಂದು search engine ಆಗಿ ಮಾತ್ರ ಉಳಿದಿಲ್ಲ.
  • Google home ಆಗಿ ನಮ್ಮ ಮನೆಯ ಒಂದು ಮುದ್ದಿನ ಮರಿಯಾಗಿ ಮೂಲೇನಲ್ಲಿ ಕೂತು ಇಡೀ ಮನೆಯ ಸ್ವಿಚ್ ಗಳನ್ನ ಕಂಟ್ರೋಲ್ ಮಾಡಬಲ್ಲಳು.
  • Google Fit ಆಗಿ ನಿಮ್ಮ ಫಿಟ್ನೆಸ್ ನಲ್ಲಿ ಯಾವಾಗಲೂ ನಿಮ್ಮೊಂದಿಗಿರುತ್ತಾಳೆ.
  • ಮತ್ತೀಗ ಬಾರ್ಡ್ (Bard) ಆಗಿ large language model (LLM) ಆಗಿ content ಗಳಿಗೆ ಸಪೋರ್ಟ್ ಮಾಡ್ತಾಳೆ.

ಮೊದ ಮೊದಲು Bard ಎಂದರೆ ಮೂಗು ಮುರಿಯುತ್ತಿದ್ದ ನನಗೆ ಬಾರ್ಡ್ ಅಷ್ಟು dumb ಅಲ್ಲ ಅಂತ ಗೊತ್ತಾಗೋಕೆ ಶುರು ಆಗಿದ್ದು ಬಾರ್ಡ್ ನ experimental version ಗೆ sign up ಆದ ನಂತರ. ಇನ್ನ data safety wise Bard claim innocence unlike Chat gpt. ಒಮ್ಮೆ ಪ್ರಯತ್ನಿಸಿ. ಹೀಗೆ Google products ಮತ್ತು services ಗಳಿಂದ ಹೊಸ ಹೊಸ ಅವಕಾಶಗಳನ್ನೆ ತೆರೆದಿವೆ ಮತ್ತು ಮುಂದೇನು ಇದೆ ರೀತಿ ಹೊಸ ಅವಕಾಶಗಳು ಬರ್ತಾನೆ ಇರ್ತಾವೆ.

September ನ Google cloud next key note ನಲ್ಲಿ ಗೂಗಲ್ AI ನ CEO Jeff Dean Gen AI ನ ಕುರಿತಾಗಿ ಒಂದಷ್ಟು announcement ಮಾಡಿದ್ರು. ಮುಂದಿನ ದಿನಗಳಲ್ಲಿ Vertex AI, Duet AI ಗಳಲ್ಲಿ ಒಂದಷ್ಟು ಹೊಸ ಆವಿಷ್ಕಾರಗಳನ್ನು ನಾವು ಗೂಗಲ್ ನಿಂದ ನಿರೀಕ್ಷಿಸಬಹುದು. ಮುಂದಿನ ವರ್ಷಗಳಲ್ಲಿ generative AI ಹೊಸ ಕ್ರಾಂತಿ ಮೂಡಿಸೋದಂತು ಸತ್ಯ.
Gen AI is no longer hype. It’s high time to get into the bus.

ಇದನ್ನೂ ಓದಿ: ನಿಮ್ಮ ಲೈಫ್‌ ಮಿರರ್ ಮಾಡುವ ಗೇಮ್‌ ಇದು!

ನಿಮ್ಮಲ್ಲಿ ಕೆಲವರು ಈಗಾಗಲೇ Google search engine ನ ಹೊಸ feature SGE (Search Generative Experience) ಅನ್ನ ಗಮನಿಸಿರ್ತಿರ. ಇದು Generative AI ಅನ್ನ ಬಳಸಿಕೊಂಡು ನಾವು ಹುಡುಕುವ ವಿಷಯದ ಒಳನೋಟಗಳನ್ನು result ಆಗಿ ಕೊಡುತ್ತೆ.

ಆದ್ರೆ ಈ excessive google knowledge ನಮ್ ಡಾಕ್ಟ್ರು ಮತ್ತೆ ಲಾಯರ್ ಗಳಿಗೆ ದೊಡ್ ತಲೆ ನೋವು ಆಗಿರೋದು ಅಂತೂ ನಿಜ ಬಿಡಿ.
ಯಾರಾದ್ರೂ ಡಾಕ್ಟರ್ ಇಲ್ಲ ಲಾಯರ್ ಗಳ ಹತ್ರ ಹೋದ್ರೆ ಅವ್ರು ಕೇಳೋ ಮೊದಲ್ನೇ ಪ್ರಶ್ನೆ ನೀವು software ಮಂದಿ ಅಲ್ಲ ತಾನೇ ಅನ್ನೊದ್ ಆದ್ರೆ ಎರಡನೇ ಪ್ರಶ್ನೆ ನೀವು ಗೂಗಲ್ ಮಾಡ್ಕೊಂಡ್ ಬಂದಿಲ್ಲ ತಾನೇ ಅಂತ.

25 ಅನ್ನೋದು adulting ನ ಸಂಕೇತ. Adulting involves a lot of responsibility.

ಇತ್ತೀಚೆಗೆ ಬೆಲ್ಜಿಯಂ ನ ವ್ಯಕ್ತಿಯೊಬ್ಬ AI chatbot ನ ಪ್ರಚೋದನೆ ಇಂದ ಆತ್ಮಹತ್ಯೆ ಮಾಡ್ಕೊಂಡ ಸುದ್ದಿ ಗೊತ್ತಿರೋದೇನೆ. Generative AI ನಲ್ಲಿ ದಾಪುಗಾಲು ಇಡುತ್ತಿರುವ Google ಇನ್ನಷ್ಟು conscious (Conscious AI) ಹಾಗೂ responsible (Responsible AI) ಆಗಿ ಜನರನ್ನ ತಲುಪಲಿ…

ಹ್ಯಾಪಿ ಬರ್ತ್ ಡೇ ಗೂಗಲ್ ❤️❤️❤️

~ ಕಾವ್ಯಶ್ರೀ

One thought on “Google ಗೆ 25 ವರ್ಷ”
  1. ಓರಿದೆ. ಉತ್ತಮ ಮಾಹಿತಿ ಹಂಚಿಕೊಂಡಿದ್ದೀರಿ. ಧನ್ಯವಾದಗಳೊಂದಿಗೆ.
    ಡಾ. ಸಂಗನಗೌಡ ಹಿರೇಗೌಡ

Leave a Reply

Your email address will not be published. Required fields are marked *