ದಾವಣಗೆರೆ: ಅಡುಗೆ ಮನೆಯ ಸಿಲಿಂಡರ್ ಸ್ಟೋಟಗೊಂಡು ಗಂಭೀರ ಗಾಯಗಳಾಗಿರುವ ಘಟನೆಯು ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿರುವುದು ತಿಳಿದುಬಂದಿದೆ.
ಸಿಲಿಂಡರ್ ಸ್ಪೋಟಗೊಂಡಿರುವ ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯಗಳಾಗಿದ್ದು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸಿಡಿದ ರಭಸಕ್ಕೆ ಸೀಲಿಂಗ್(ಮೇಲ್ಷಾವಣಿ) ಹಾರಿದೆ.
ಅಡುಗೆ ಮಾಡಲೆಂದು ಗ್ಯಾಸ್ ಆನ್ ಮಾಡಿದ ಕೂಡಲೇ ಸ್ಪೋಟಗೊಂಡಿದ್ದು ಈ ಘಟನೆಯಲ್ಲಿ ಮುನೀರ್ ಸಾಬ್(65), ಶಬೀನಾ ಬಾನು(34), ಫರೀದಾ ಬಾನು(58), ತಮನ್ನಾ(14), ಅಲ್ತಾಫ್(15), ಸುಲ್ತಾನ್(18) ಹೆಚ್ಚು ಗಾಯಾಗಳಾದವರಾಗಿದ್ದು, ಮುನೀರ್ ಸಾಬ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಸಿಲಿಂಡರ್ ಸ್ಪೋಟದಿಂದ ಮನೆಯ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು ಪ್ರಕರಣವು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.