ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಮತ್ತೊಂದು ಸಮಸ್ಯೆಯೆಂದರೆ ಹಿಮ್ಮಡಿ ಬಿರುಕು ಬಿಡುವುದು. ಇದು ನಮ್ಮ ಸೌಂದರ್ಯವನ್ನು ಮಾತ್ರವಲ್ಲದೆ ಆರೋಗ್ಯವನ್ನು ಕೂಡಾ ಹಾಳು ಮಾಡುತ್ತದೆ.
ಹಿಮ್ಮಡಿ ಬಿರುಕು ಬಿಟ್ಟ ಸ್ಥಳದಲ್ಲಿ ದೂಳು ಮಣ್ಣೂ ಸೇರಿಕೊಂಡು ಇನ್‌ಫೆಕ್ಷನ್ ಆಗಿ ಗಾಯವಾಗಿ ಅದರಿಂದ ರಕ್ತ, ಕೀವು, ಬರುವುದಲ್ಲದೆ ಸಹಿಸಲಾಗದಂತಹ ನೋವನ್ನು ನೀಡುತ್ತದೆ.
ಬಿರುಕು ಬಿಟ್ಟ ಕಾಲಿನ ಸಮಸ್ಯೆಯಿಂದ ಬಳಲುತ್ತಿರುವವರು ಮಾರುಕಟ್ಟೆಯಲ್ಲಿ ಮತ್ತು ಜಾಹೀರಾತಿನಲ್ಲಿ ಬರುವಂತಹ ಪ್ರಾಡಕ್ಟ್ ಬಳಕೆ ಮಾಡಿ ಪರಿಹಾರ ಸಿಗದೆ ಸುಮ್ಮನಾಗಿರುತ್ತಾರೆ.
ನಮ್ಮ ಅಡುಗೆ ಮನೆಯಲ್ಲಿ ಸಿಗುವಂತಹ ಈ ಒಂದು ವಸ್ತು ಕ್ರಮೇಣ ಆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಯಾವುದು ಆ ವಸ್ತು ಎಂದು ಯೋಚಿಸಿದ್ದೀರಾ ?
ಒಂದು ನಿಂಬೆಹಣ್ಣಿನಿಂದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ತುಪ್ಪ, ಕರ್ಪೂರ ಸಮಪ್ರಮಾಣದಲ್ಲಿ ಕಾಯಿಸಿ ಪ್ರೀಜರ್‌ನಲ್ಲಿಟ್ಟು ಐಸ್ ಕ್ಯೂಬಿನಿಂದ ರಬ್ ಮಾಡಿಕೊಂಡು ಬೆಚ್ಚಗಿನ ನೀರಿನಿಂದ ತೊಳೆದರೆ ಕ್ರಮೇಣಾ ಕಡಿಮೆಯಾಗುತ್ತದೆ.
ವ್ಯಾಸಲಿನ್,ನಿಂಬೆಗಣ್ಣು.ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಚ್ಚಿ ಮಸಾಜ್ ಮಾಡಿ ತೊಳೆಯುವುದರಿಂದ ಬರುಬರುತ್ತಾ ಕಡಿಮೆಯಾಗುತ್ತದೆ.
ದಿನರಾತ್ರಿ ಕೊಬ್ಬರಿ ಎಣೆಯನ್ನು ಹಚ್ಚಬೇಕು.