ಬಸ್ಸೇ ಇಲ್ಲದ ಊರಲ್ಲಿದ್ದ ನಮ್ಮಪ್ಪ
ನಾಲ್ಕು ಮಕ್ಕಳ ಜೊತೆಗೆ ಹೆಂಡತಿಯನ್ನು ತಿನ್ನಲು ಊಟವಿಲ್ಲದ ಕಾಲದಲ್ಲಿ
ಕಷ್ಟವನ್ನೆಲ್ಲಾ ತನ್ನ ಹೆಗಲಮೇಲೆ ಹೊತ್ತುಕೊಂಡಿದ್ದ.
ಮನೆಯ ಜವಾಬ್ದಾರಿಯನ್ನೆಲ್ಲಾ ಏಕಾಂಗಿಯಾಗಿ ನಿಭಾಯಿಸುತ್ತಿದ್ದ ಅಪ್ಪ
ತನ್ನ ಮಕ್ಕಳು ನಾಲ್ಕಕ್ಷರ ಕಲ್ತುಕೊಂಡು ವಿದ್ಯಾವಂತರಾಗಲಿ ಎಂದು ಕನಸು ಕಂಡಿದ್ದ.
ಅಂತೆಯೇ ನಾಲ್ಕೂ ಮಕ್ಕಳನ್ನು ಓದಿಸುತ್ತಾನೆ ತನ್ನ ಕಷ್ಟದ ದಿನಗಳಲ್ಲಿ
ಎಷ್ಟು ಓದ್ತೀರೊ ಓದಿ ನನ್ನ ರಕ್ತ ಮಾರಿಯಾದರೂ ನಿಮ್ಮನ್ನ ಓದಿಸ್ತೀನಿ ಎಂದಿದ್ದ ನನ್ನಪ್ಪ.
ಆದರೆ ಮಕ್ಕಳೊ ಅಪ್ಪ-ಅಮ್ಮನ ಕಷ್ಟವನ್ನರಿಯದೆ ಅದೂ ಕೊಡ್ಸಿಲ್ಲ, ಇದು ಕೊಡ್ಸಿಲ್ಲ,
ನನ್ನ ಪ್ರೇಂಡ್ಸ್ ಅಪ್ಪಂದಿರು ಅವರು ಏನ್ ಕೇಳಿದ್ರೂ ಕೊಡಿಸ್ತಾರೆ ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಮನಸ್ಸು ನೋಯಿಸುತ್ತಿದ್ದರು.
ಆ ಮಾತುಗಳನ್ನ ಕೇಳಿಸಿಕೊಂಡ ತಂದೆಯ ಮನಸ್ಸಿಗೆ ನೋವಾಗಿದ್ದರೂ ಇನ್ನೂ ಚಿಕ್ಕ ಮಕ್ಕಳು ಎಂದು ಕೋಪಮಾಡಿಕೊಳ್ಳದೆ ತಾವಿರುವ ಪರಿಸ್ಥಿತಿಯನ್ನು ಅರ್ಥಮಾಡಿಸಲು ಮುಂದಾಗ್ತಾರೆ.ನೋಡಿ, ಮಕ್ಕಳೇ ನಾವು ಬಡವರು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು.ಹೆಚ್ಚು ದುಡ್ಡಿರುವವರು ದೊಡ್ಡದಾಗಿ ಏನನ್ನಾದರೂ ತೆಗೆದುಕೊಳ್ಳುತ್ತಾರೆ
ನಾವೂ ಒಬ್ಬರನ್ನು ನೋಡಿ ಅವರಂತೆ ಬದುಕಬೇಕೆಂದರೆ ತುಂಬಾ ಕಷ್ಟವಾಗುತ್ತದೆ.ಇರುವುದರಲ್ಲಿ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿಯಬೇಕು. ನೀವು ಓದಿ ಬುದ್ದಿವಂತರಾದ್ರೆ ಭವಿಷ್ಯದಲ್ಲಿ ಚೆನ್ನಾಗಿರ್ತೀರಾ!
ಮುಂದೆ ನಮಗೂ ಒಳ್ಳೇ ಕಾಲ ಬರುತ್ತದೆ ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು
ಎಂದು ಹೇಳಿ ಸಮಾಧಾನ ಮಾಡ್ತಾರೆ.
ಆದ್ರೂ ಯಾವುದೇ ಕೊರತೆ ಬರದ ಹಾಗೆ ನಮ್ಮನ್ನು ಸಮಾಧಾನ ಪಡಿಸಲು ನಾವು ಕೇಳಿದಂತಹುದೇ ಅಲ್ಲದೆ
ಅದಕ್ಕಿಂತ ಕಡಿಮೆ ಪ್ರಮಾಣದ್ದು ಕೊಡಿಸಿದ್ದುಂಟು
ಹೀಗೆ ಬಡತನವನ್ನು, ಪರಿಸ್ಥಿತಿಗಳಿಗೆ ಸ್ಪಂಧಿಸುವುದನ್ನು ಒಳ್ಳೇದು-ಕೆಟ್ಟದ್ದು ಎರಡೂ ಇರುತ್ತದೆ ಅದರಲ್ಲಿ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನ ಅಪ್ಪ ನಮಗೆ ಚಿಕ್ಕಂದಿನಿಂದಲೇ ಕಲಿಸಿಕೊಟ್ಟಿರುವುದರಿಂದ ಸಮಾಜದಲ್ಲಿ ಉತ್ತಮ ನಾಗರೀಕನಾಗಿ ಬದುಕಲು ಸಾದ್ಯವಾಯಿತು.
ಅಪ್ಪನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಅಪ್ಪನಂತ ಜೀವನದ ಪಾಠ ತಿಳಿಸುವ ಶಿಕ್ಷಕ ಮತ್ತೊಬ್ಬನಿರಲು ಸಾದ್ಯವೇ ಇಲ್ಲ ಅಪ್ಪ ನಿನಗೆ ಸರಿಸಾಟಿ ಯಾರಿಲ್ಲ.