ಪ್ರವಾಸಿ ತಾಣಗಳಲ್ಲಿ ಸುಳಿದಾಡುವ ಮಂಗಗಳು / ಕೋತಿಗಳು ಪ್ರವಾಸಿಗರು ಕೊಡುವ ಜಂಕ್ ಅಂಡ್ ಫಾಸ್ಟ್ ಫುಡ್ ಗಳನ್ನ ತಿನ್ನುತ್ತವೆ. ಹಾಗೆಯೇ ಸಾಫ್ಟ್ ಡ್ರಿoಕ್ಸ್ ಗಳನ್ನ ಕುಡಿಯುತ್ತವೆ. ವಷ೯ಗಟ್ಟಲೇ ಈ ರೀತಿಯ ಪ್ರವಾಸಿಗರು ಆಹಾರ ಕೊಡುವ ಔದಾಯ೯ಕ್ಕೆ ಸಿಲುಕಿ ಮಂಗಗಳು-ಅಳಿಲುಗಳು ಸುತ್ತಲಿನ ಸಣ್ಣ ಪುಟ್ಟ ಕಾಡುಗಳಲ್ಲಿ ಸುತ್ತಾಡಿ, ಮರ ಹತ್ತಿ-ಇಳಿದು-ಎಗರಿ ಮತ್ತೊಂದು ಮಾಡಿ ಆಹಾರ ದಕ್ಕಿಸಿಕೊಳ್ಳುವ ಪರಿಪಾಠ ಕೈಬಿಟ್ಟಿವೆ.
ಹೀಗಾಗಿ ಪ್ರವಾಸಿ ತಾಣಗಳಾದ ಕೋಟೆ-ಕೊತ್ತಲು-ಜಲಾಶಯ -ದೇವಸ್ಥಾನಗಳ ಬಳಿ ಸದಾ ಇರುವ ಕೋತಿ ಮಂಗಣ್ಣಗಳ ಆರೋಗ್ಯ ಬಹುತೇಕ ಮೆಟಬಾಲಿಕ್ ಡಿಸಾಡ೯ರ್, ಸಿಂಡ್ರೋಮ್ ಗಳಿಗೆ ತುತ್ತಾಗಿರುತ್ತವೆ. ಯಾವುದೇ ಪಶುವೈದ್ಯರನ್ನ ಕರೆದೊಯ್ದು ಅವುಗಳನ್ನ ತಪಾಸಣೆ ಮಾಡಿಸಿ ನೋಡಿ ಅವುಗಳೂ ಕೂ ಡಯಾಬಿಟಿಕ್ -ಬಿಪಿಗೆ ತುತ್ತಾಗಿರುತ್ತವಲ್ಲದೇ ಇತರೆ ಹಾಮೋ೯ನಲ್ ಡಿಸಾಡ೯ರ್ ಗೆ ಸಿಕ್ಕು ನರಳುತ್ತವೆ. ಹಾಗಾಗಿ ಸ್ಥೂಲಕಾಯದಿಂದಲೋ ಅಥವಾ ಮಾಲ್ ನ್ಯೂಟ್ರಿಷನ್ ನಿಂದಲೋ ತಮ್ಮ ಸಹಜ ಆರೋಗ್ಯ ಮತ್ತು ಚಟುವಟಿಕೆಯುಕ್ತ ಜೀವನ ಶೈಲಿಗೆ ಗುಡ್‌ಬೈ ಹೇಳಿ ಡಿಟ್ಟೋ ಮನುಷ್ಯರoತೆ ಒಬೇಸ್ ಆಗಿ ಕುಂತಲ್ಲೇ ಕೂತಿರುವ / ನಿಂತಲ್ಲೇ ನಿಂತಿರುತ್ತವೆ. ಹಾಗೆಯೇ ಜನರು ತಿಂಡಿ-ಪೊಟ್ಟಣಗಳನ್ನ ನೀಡದೆ ಇದ್ದಾಗ ಹೆಚ್ಚೆಚ್ಚು ಅಗ್ರೆಸಿವ್ ಆಗಿ ವತಿ೯ಸುತ್ತವೆ. ಸ್ವತಃ ಜನರ ಕೈಯಿಂದ ಮುಲಾಜಿಲ್ಲದೆ ಕಿತ್ತುಕೊಂಡು ಹೋಗುತ್ತವೆ.

ಇನ್ನು ಹಳ್ಳಿ ಪಟ್ಟಣಗಳಲ್ಲಿ ಸಾಕುವ ಲೋಕಲ್ ನಾಯಿಗಳ ಕಥೆ ಮತ್ತಷ್ಟು ಭಯಾನಕ. ಬಹುತೇಕ ನಾಯಿಗಳು ಕೋಳಿ-ಮೀನು-ಮಾಂಸದಂಗಡಿಗಳ ಸುತ್ತ ಇರುತ್ತವೆ. ಅಥವಾ ಅವುಗಳ ತ್ಯಾಜ್ಯ ಶೇಖರಿಸುವ ತಿಪ್ಪೆಗಳ ಬಳಿ ಠಿಕಾಣಿ ಹಾಕುತ್ತವೆ… ಮಾಂಸದ ತ್ಯಾಜ್ಯದ ರುಚಿಗೆ ಅಡಿಕ್ಟ್ ಆಗಿ ಮನೆಯ ಮುದ್ದೆ ಅನ್ನವನ್ನ ಮೂಸದಂತಾಗುತ್ತವೆ. ಸೋ ಇಂತಹ ನಾಯಿಗಳೇ ಸುಖಾಸುಮ್ಮನೆ ಬೊಗಳುವುದು, ಸಣ್ಣ ಸದ್ದಿಗೆ ಪ್ಯಾನಿಕ್ ಆಗಿ ಡಿಸ್ಟಬ್೯ ಆಗಿ ಗಂಟೆಗಟ್ಟಲೇ ಕಿರಿಚಾಡುವುದು. ಹಿಂಡು ಹಿoಡಾಗಿ ಹಸಿದ ತೋಳಗಳoತೆ ಮಕ್ಕಳ ಮೇಲೆ ಎರಗುವುದು… ಇದೆಲ್ಲಾ ಕೇವಲ ಆಹಾರಕ್ರಮದ ವ್ಯತ್ಯಯ ಮತ್ತು ಸಲೀಸಾಗಿ ಎಲ್ಲೆಂದರಲ್ಲೇ ಬಾಯಿಗೆ ಸಿಕ್ಕುವ ಹಸಿ ಮಾoಸಾಹಾರವೇ ನೇರ ಕಾರಣ.
ಅತಿಯಾದ ಕ್ಯಾಲರಿ ಮತ್ತು ಬ್ಯಾಡ್ ಫ್ಯಾಟ್ ದೇಹಕ್ಕೆ ಸೇರುತ್ತಾ ಹೋದಂತೆ ಎಲ್ಲ ಮನುಷ್ಯರು ಪ್ರಾಣಿ-ಪಕ್ಷಿ(ಸದಾ ಮಾಂಸದಂಗಡಿಗಳ ಸುತ್ತ ನೆರೆಯುವ ಹದ್ದು-ಕಾಗೆಗಳು)ಗಳು ಮೆಟಬಾಲಿಕ್ ಡಿಸಾಡ೯ರ್ – ಸಿಂಡ್ರೋಮ್ ಗೆ ತುತ್ತಾಗಿ ಮನೋದೈಹಿಕ ಕ್ಷಮತೆ ಕಳೆದುಕೊಂಡು ಸಹಜ ಆರೋಗ್ಯ ಕಳೆದುಕೊಳ್ಳುತ್ತಾರೆ. ನಾವು ಸುಖಾಸುಮ್ಮನೆ ಕಳೆದುಕೊಂಡ ಆರೋಗ್ಯವನ್ನೇ ವೈದ್ಯರು ಕಾಯಿಲೆ ಅಂತ ಹೆಸರಿಟ್ಟು ಚಿಕಿತ್ಸೆಯ ರೂಪದಲ್ಲಿ ಆರೋಗ್ಯದ ವ್ಯತ್ಯಾಸಗಳನ್ನ ವಾಸಿಯಾಗದ ಆದರೆ ಸದಾ ಮಾನಿಟರಿಂಗ್ ಮಾಡುತ್ತಾ ನಿಭಾಯಿಸಿಕೊಂಡು ಹೋಗಬಹುದಾದ ಶಾಶ್ವತ ಕಾಯಿಲೆಗಳನ್ನಾಗಿ ಮಾಪ೯ಡಿಸುತ್ತಾರೆ.
ಸೋ ಆಹಾರವೇ ಔಷದ ವಾದಾಗ ಮಾತ್ರ Medical dependencyಯಿಂದ ಶಾಶ್ವತ ಮುಕ್ತಿ ಸಾಧ್ಯ. ಇಲ್ಲವಾದರೆ ಮೆಡಿಕಲ್ ಮಾಫಿಯಾದ ಮಿಥ್ ಗಳ ಆಳಕ್ಕೆ ತುಳಿಸಿಕೊಂಡು ಇತಿಹಾಸವಾಗಬೇಕಾಗುತ್ತದೆ.

ಸಂತೋಷ್‌ ಕೋಡಿಹಳ್ಳಿ, ಚಿತ್ರದುರ್ಗ

Leave a Reply

Your email address will not be published. Required fields are marked *