ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ʼನಾನು ಜೀವಂತವಾಗಿರುವವರೆಗೂ ಬಿಜೆಪಿಗೆ ಸೇರುವುದಿಲ್ಲʼ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಈಶ್ವರಪ್ಪ, ʼಅವರ ಹೆಣವನ್ನು ತೆಗೆದುಕೊಂಡು ನಾನೇನು ಮಾಡಲಿ?ʼ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ʻಸಿದ್ದರಾಮಯ್ಯನನ್ನು ಜೀವಂತವಾಗಿಯೇ ಬಿಜೆಪಿಗೆ ಸೇರಿಸಿಕೊಳ್ಳಲ್ಲ, ಇನ್ನು ಅವರ ಹೆಣ ತೆಗೆದುಕೊಂಡು ನಾವು ಏನು ಮಾಡೋಣ?, ಸಿದ್ದರಾಮಯ್ಯನ ಹೆಣವನ್ನು ನಾಯಿಯೂ ಮೂಸು ನೋಡುವುದಿಲ್ಲ ಅಂತಹದ್ರಲ್ಲಿ ನಾವೇಕೆ ಅದನ್ನು ಮುಟ್ಟಬೇಕು? ಸಿದ್ದರಾಮಯ್ಯ ಅರೆಹುಚ್ಚರ ಥರ ಬಾಯಿಗೆ ಬಂದಿದ್ದನ್ನು ಮಾತನಾಡುವುದು ಅವರಿಗೆ ಶೋಭೆಯಲ್ಲʼ ಎಂದು ಗುಡುಗಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದರ ಬಗ್ಗೆ ಮಾತನಾಡಿರುವ ಅವರು, ʼಬಾದಾಮಿ ಕ್ಷೇತ್ರ ಬೇಡವೆಂದರೆ ಮತ್ತೆ ಚಾಮುಂಡೇಶ್ವರಿಗೆ ವಾಪಸ್ ಹೋಗಿ, ಯಾಕೆಂದರೆ ಅದು ನಿಮ್ಮದೇ ಕ್ಷೇತ್ರವಾದ್ದರಿಂದ ನೀವು ಅಲ್ಲಿ ಗೆಲ್ಲುತ್ತೀರಾ. ಯಾಕೆ ಕೋಲಾರವನ್ನು ಹುಡುಕಿ ಹೋಗಿದ್ದೀರಾ? ಅಲ್ಲಿ ಇರುವ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು. ನೀವು ನಂಬಿಕಸ್ತನಲ್ಲ ಎಂದು. ಬೇರೆ ಕ್ಷೇತ್ರಗಳಲ್ಲಿ ಸೋಲುವ ಭಯವಿರುವುದರಿಂದ ಕೋಲಾರಕ್ಕೆ ಬಂದಿರುವುದುʼ ಎಂದು ವಾಗ್ದಾಳಿ ನಡೆಸಿದರು.