ಏನಿದು ನಮ್ಮನ್ನು ನಾವು ಕಟ್ಟಿಕೊಳ್ಳಲು ಅಂದರೆ? ನಿಜ ನಾವೆಲ್ಲಾ ಮಾನವರೆ ಮೂಲದಲ್ಲಿ ಅಲೆಮಾರಿಗಳೆ ಬೇರೆ ಪ್ರಾಣಿಗಳಂತೆ ಆದರೆ ಅಂಡೆಲೆಯುವುದು ನಿಲ್ಲಿಸಿ ಒಂದು ಕಡೆ ನೆಲೆ ನಿಂತು ಬದುಕಲು ಶುರು ಮಾಡಿ ಸಾವಿರಾರು ವರ್ಷ ಆಗಿದೆ ಅಂದಿನಿಂದ ಇಂದಿನವರೆಗೂ ಗಡಿಗಳ ಹಾಕಿಕೊಂಡು ಬದುಕುವುದು ಅನಿವಾರ್ಯವಾಗಿದೆ. ಈ ಗಡಿಗಳಲ್ಲಿ ಕೂಡ ಹಲವಾರು ಬಗೆಗಳಿವೆ ಅವುಗಳು ಇಂತಿವೆ ಜಾತಿ ಧರ್ಮ ಭಾಷೆ ಇತ್ಯಾದಿಗಳು. ಈ ಬಗೆಬಗೆಯ ಗಡಿಗಳಲ್ಲಿ ನೀವು ಹೋಲಿಕೆ ಮಾಡಿ ನೋಡಿದರೆ ಭಾಷೆಯ ಗಡಿ ಅತ್ಯಂತ ವೈಜ್ಞಾನಿಕವಾದದ್ದು ವೈಚಾರಿಕವಾದದ್ದು ಮತ್ತು ಜನಸಾಮಾನ್ಯರಿಗೆ ಉಪಯುಕ್ತವಾದದ್ದು.

ಇನ್ನುಳಿದ ಗಡಿಗಳಾದ ಜಾತಿ ಧರ್ಮ ಇವುಗಳು ಜನಸಾಮಾನ್ಯರಿಗೆ ಮಾರಕವಾದದ್ದು ಆದರೆ ಮೇಲ್ಮಟ್ಟದಲ್ಲಿ ಇರುವ ವ್ಯಕ್ತಿಗಳಿಗೆ ಇದು ಬಹಳ ಅನುಕೂಲಕರ ಆದುದ್ದರಿಂದ ಕೆಲವೇ ಕೆಲವರು ಲಾಭ ಪಡೆಯಲು ಈ ಜಾತಿ ಧರ್ಮ ಈ ಒಂದು ಗಡಿಗಳನ್ನು ಒಳ್ಳೆಯ ಗಡಿ ಎಂದು ಬಿಂಬಿಸಿದ್ದಾರೆ. ಈ ಗಡಿಯ ವಿಚಾರ ಕೇವಲ ಭೂ ಭಾಗಕ್ಕೆ ಸಂಬಂಧಿಸಿದಲ್ಲ ನಮ್ಮ ಮೆದುಳಿನೊಳಗೆ ಕೂಡ ಗಡಿ ಸೃಷ್ಟಿಯಾಗುತ್ತದೆ.

ನುಡಿಯೇ ಗಡಿಯಾದಾಗ ನಮ್ಮ ನುಡಿಯಲ್ಲಿ ಮಾತನಾಡಿದವರನ್ನು ಬಿಟ್ಟು ಬೇರೆ ನುಡಿಯಲ್ಲಿ ಮಾತನಾಡಿದವರು ಇಲ್ಲಿಯವರಲ್ಲ ಇವರು ಬೇರೆ ಕಡೆ ಅವರು ಎಂಬ ಮಾರಕವಲ್ಲದ ಅನಿಸಿಕೆ ಮೂಡುತ್ತದೆ ವಿನಹ ವೃತ್ತಿ ಜಾತಿ ಧರ್ಮ ಗಡಿಗಳಲ್ಲಿ ಮೂಡುವ ಬೇರೆಯವರು ಎಂಬ ಮಾರಕವಾದ ಭಾವನೆ ಮೂಡುವುದಿಲ್ಲ. ಬೇರೆ ಜಾಗದವರು ಎಂಬುದಕ್ಕೂ ಬೇರೆಯವರು ಎಂಬುದಕ್ಕೂ ಬಹಳ ವ್ಯತ್ಯಾಸವಿದೆ. ಬೇರೆಯವರು ಎಂಬ ಭಾವ ದ್ವೇಷ ಅಸೂಯೆ ಜಗಳಕ್ಕೆ ದಾರಿ ಮಾಡಿಕೊಡುತ್ತದೆ ಅದೇ ಬೇರೆ ಜಾಗದವರು ಎಂಬ ಭಾವ ಇದಿಯಲ್ಲ ವಿಚಾರ ಕೇಂದ್ರಿತ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದಷ್ಟೆ.

ಕನ್ನಡವೇ ನಮ್ಮ ಗಡಿಯಾಗಬೇಕು ಕನ್ನಡವೇ ನಮ್ಮ ನಾಡು ಕಟ್ಟುವಿಕೆಗೂ ತಳಪಾಯವಾಗಬೇಕು ಜಗತ್ತು ನಮ್ಮನ್ನು ಕನ್ನಡ ನಾಡಿನವರು ಎಂದು ಗುರುತಿಸಬೇಕು. ಜಾತಿ ಧರ್ಮಗಳ ದಾಳಿಯಿಂದ ಕನ್ನಡಿಗರ ನಡುವೆ ಅಸಮಾನತೆ ಕನ್ನಡ ನಾಡಿನೊಳಗೆ ಅಸಮಾನತೆ ತಾಂಡವವಾಡುತ್ತಿರುವುದರಿಂದ ಅದನ್ನು ಸರಿಪಡಿಸಿಕೊಂಡು ನಮ್ಮನ್ನು ನಾವು ಕಟ್ಟಿಕೊಳ್ಳಲು ದ್ರಾವಿಡ ನಮ್ಮ ಅಸ್ತ್ರವಾಗಿದೆ.

ಸಾವಿರಾರು ವರ್ಷಗಳ ಇಂದಿನ ಇತಿಹಾಸ ತಿಳಿದರೆ ಅಲ್ಲಿ ಕಂಡುಬರುವುದು ದ್ರಾವಿಡರು ಮಾತ್ರವೇ ಇಲ್ಲಿ ಇದ್ದಂತ ಸಮಯದಲ್ಲಿ ಮಾತ್ರವೆ ಜನಸಾಮಾನ್ಯರು ಸಮಾನತೆಯಿಂದ ಎಲ್ಲರೂ ಅನುಕೂಲಕರವಾಗಿ ಬದುಕುತಿದ್ದಂತಹ ಇತಿಹಾಸ ಗೋಚರಿಸುತ್ತದೆ. ಬೇರೆಲ್ಲ ಸಮಯದಲ್ಲಿ ರಾಜ ರಾಣಿಯರ ಇತಿಹಾಸ ಪುಂಡು ಪೋಕಿರಿ ಪುರೋಹಿತರ ಇತಿಹಾಸ ದೇವರು ದಿಂಡರು ದೆವ್ವ ದೇವಸ್ಥಾನಗಳ ಇತಿಹಾಸ ಮಾತ್ರವೇ ಸಿಗುತ್ತದೆ ಆ ಸಮಯದಲ್ಲೆಲ್ಲ ಜನಸಾಮಾನ್ಯರು ನರಳಿ ನರಳಿ ಬದುಕಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ದೇವರು ಜಾತಿ ಧರ್ಮ ಅಪಾಯಕಾರಿ ಗಡಿಗಳು ದಬ್ಬಾಳಿಕೆಗಳು ನಮ್ಮನ್ನು ಮತ್ತೆ ರಾಜ ರಾಣಿಯ ಕಾಲದಲ್ಲಿ ಇದ್ದಂತ ನರಳಾಟದ ಜೀವನಕ್ಕೆ ಕೊಂಡೊಯ್ಯುತ್ತಿವೆ, ಆದುದರಿಂದ ಅಸಮಾನತೆಗೆ ಕಾರಣವಾಗಿರುವ ಸಂಸ್ಕೃತ ಹಿಂದಿ ಹೇರಿಕೆಯ ತೆಗೆದಾಕಿ ಕನ್ನಡ ನುಡಿಯನ್ನು ಕಟ್ಟಿಕೊಳ್ಳೋಣ, ಬರೀ ರಾಜ್ಯವಾಗಿರುವ ಕರ್ನಾಟಕವನ್ನು ಸ್ವಾಯತತ್ತೆ ಪಡೆದು ಮೇಲ್ದರ್ಜೆಗೇರಿಸಿಕೊಂಡು ಕನ್ನಡ ನಾಡು ಕಟ್ಟಿಕೊಳ್ಳೋಣ. ನಮ್ಮ ನಾಡಿನೊಳಗೆ ಮಾತನಾಡಲು ದ್ರಾವಿಡ ಕನ್ನಡ ಸಾಕು ಬೇರೆ ನಾಡಿನಲ್ಲಿ ಮಾತನಾಡಲು ಇಂಗ್ಲಿಷ್ ಸಾಕು ಎರಡು ನುಡಿಯ ಕನ್ನಡ ನಾಡು ಕಟ್ಟಿಕೊಳ್ಳೋಣ ನಮ್ಮ ಏಳಿಗೆಗಾಗಿ ನಾವು ದ್ರಾವಿಡ ಕನ್ನಡಿಗರಾಗೋಣ.

ಇಂದಿನಿಂದಲೆ ನಾವು ದ್ರಾವಿಡ ಕನ್ನಡಿಗರು ಎಂದು ಪ್ರತಿಪಾದಿಸಿ ಕನ್ನಡ ನಾಡು ನುಡಿ ಮತ್ತು ಜನಸಾಮಾನ್ಯರ ಏಳಿಗೆಗೆ ನಿಮ್ಮದೇ ಕೊಡುಗೆ ನೀಡಿ.

ಅಭಿ, ದ್ರಾವಿಡ ಕನ್ನಡಿಗರು

Leave a Reply

Your email address will not be published. Required fields are marked *