ಸೀನಿಯರ್‌ ವಿದ್ಯಾರ್ಥಿಗಳ Ragging ಗೆ ಲಂಬಾಣಿ ಸಮುದಾಯದ ಡಾ. ಪ್ರೀತಿ ಧರಾವತ್‌ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ವಾರಂಗಲ್‌ ಜಿಲ್ಲೆಯಲ್ಲಿ ನಡೆದಿದ್ದು, ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ವಾರಂಗಲ್‌ ಜಿಲ್ಲೆಯ ಕಾಕತಿಯ ಮೆಡಿಕಲ್‌ ಕಾಲೇಜಿನಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ಡಾ. ಪ್ರೀತಿ ಧರಾವತ್‌ (26) ಎಂಬ ವಿದ್ಯಾರ್ಥಿನಿ, ಅದೇ ವಿಭಾಗದಲ್ಲಿ ಆಕೆಯ ಸೀನಿಯರ್‌ ಆಗಿರುವ 27 ವರ್ಷದ ಡಾ. ಮೊಹಮ್ಮದ್‌ ಅಬ್ದುಲ್‌ ಸೈಫ್‌ ಅಲಿ ಎಂಬಾತನ ragging ಕಿರುಕುಳಕ್ಕೆ 5 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದರು. 5 ದಿನಗಳ ಜೀವನ್ಮರಣ ಹೋರಾಟದ ನಂತರ ಚಿಕಿತ್ಸೆ ಫಲಿಸದೆ ನಿನ್ನೆ ಡಾ. ಪ್ರೀತಿ ವಾರಂಗಲ್‌ನ ನಿಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು. ಆಕೆಯ ಸಾವಿಗೆ ಕಾರಣನಾದ ಅಲಿ ಸೈಫ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, Ragging ಆಕ್ಟ್‌ ಮತ್ತು SC/ST Prevension Act ಪ್ರಕಾರ ಕೇಸ್‌ ದಾಖಲಿಸಲಾಗಿದೆ. (ಲಂಬಾಣಿ ಸಮುದಾಯವು ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿದೆ)

ಡಾ. ಪ್ರೀತಿ ಧರಾವತ್

https://www.thenewsminute.com/article/abvp-stages-protest-kakatiya-medical-college-demanding-justice-preethi-173822

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ RSSನ ವಿದ್ಯಾರ್ಥಿ ಸಂಘಟನೆಯಾಗಿರುವ ABVP ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿದಿದೆ. ಸೈಫ್‌ ಅಲಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪಟ್ಟು ಹಿಡಿದಿದೆ. ಇದರ ನಡುವೆ ಜನಪ್ರಿಯ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಪತ್ರವನ್ನು ಟ್ವೀಟ್‌ ಮಾಡಿ ʼಡಾ. ಪ್ರೀತಿ ಅವರ ಸಾವು ಅತ್ಯಂತ ನೋವಿನ ಸಂಗತಿʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *