ಅಡುಗೆ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾದ ಪರಿಣಾಮ ಒಲೆಯಲ್ಲಿ ಅಡುಗೆಯನ್ನ ಮಾಡಲು ಸೌದೆಯನ್ನು ಕೂಡಿಡುತ್ತಿದ್ದಾರೆ ವಿಜಯಪುರ ಹೋಬಳಿಯ ಮುದ್ದೆನಹಳ್ಳಿಯ ಗ್ರಾಮೀಣ ಮಹಿಳೆಯರು.
ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಹಿಳೆಯರು ಆರೋಗ್ಯ ಹದಗೆಡುತ್ತದೆಂದು ಕೇಂದ್ರ ಸರ್ಕಾರ ಸಿಲಿಂಡರ್ ನೀಡಿತ್ತು. ಆದರೆ, ಬೆಲೆಯನ್ನು ದಿನೇ ದಿನೇ ಹೆಚ್ಚಿಸಿದರೆ ಬಡವರು ಏನು ಮಾಡಬೇಕೆಂದು ತಿಳಿಯದೆ, ಮತ್ತೆ ಒಲೆಯಲ್ಲಿ ಅಡುಗೆ ಮಾಡಲು ಸೌದೆಯ ಮೊರೆ ಹೋಗಿದ್ದಾರೆ ಗ್ರಾಮೀಣ ಮಹಿಳೆಯರು.
ಹೌದು 1100 ಇರುವ ಸಿಲಿಂಡರ್ ಬೆಲೆಯೀಗ 1150 ಆಗಿದೆ ನಾವು ಕೂಲಿ ಮಅಡಿ ಜೀವನ ಮಾಡುವವರು, ನಾವು ಹೇಗೆ ಇಷ್ಟು ದುಡ್ಡು ಕೊಟ್ಟು ಗ್ಯಾಸ್ ಸಿಲಿಂಡರ್ ತುಂಬಿಸುವುದು? ಎಂದು ಒಲೆಯಲ್ಲಿ ಅಡುಗೆ ಮಾಡುವುದು ಉತ್ತಮ ಗ್ಯಾಸ್‌ನಲ್ಲಿ ಮಾಡಬೇಕೆಂದರೆ ನಾವು ಸಾಲ ಮಾಡಬೇಕಾಗುತ್ತದೆಂದು ಮುದ್ದೇನಹಳ್ಳಿ ನಾರಾಯಣಮ್ಮನವರು ತಿಳಿಸಿದ್ದಾರೆ.