ತಾರತಮ್ಯ ಎಷ್ಟು ಹಂತಗಳಲ್ಲಿ ಕೆಲಸ ಮಾಡುತ್ತೆ ಅಂತ ಅರ್ಥ ಮಾಡಿಕೊಳ್ಳಲು ಇಂದು ಪ್ರಕಟವಾದ ರವಿಚಂದ್ರನ್ ಅಶ್ವಿನ್ ಅವರ ಸಂದರ್ಶನ ಓದಿ. ರವಿಚಂದ್ರನ್ ಅಶ್ವಿನ್ ಬೌಲರ್ಸ್ ಗಳ ಐಸಿಸಿ ranking ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಅವರನ್ನ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿಯ ಫೈನಲ್ ಪಂದ್ಯವಾಡಿದ ತಂಡದಿಂದ ಹೊರಗಿಡಲಾಗಿತ್ತು. ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಲಿಕ್ಕೆ ಮೇಲ್ಜಾತಿ, ಮೇಲ್ವರ್ಗ ಅತ್ಯಂತ ಸಹಕಾರಿಯಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ.

ಈ ತಾರತಮ್ಯದ ಜೊತೆಗೆ ತುಂಬ ಕೆಲಸ ಮಾಡೋದು ನೀವು ಉತ್ತರ ಭಾರತದವರ ಅಥವಾ ದಕ್ಷಿಣ ಭಾರತದವರ ಎಂಬುದು. ದ್ರಾವಿಡ್, ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಯುಡು, ನಟರಾಜನ್ ಉತ್ತರದವರಾಗಿದ್ದರೆ ಅವರಿಗೆ ಬೇರೆಯದೇ ಮಾನ್ಯತೆ ಸಿಕ್ಕಿರುತ್ತಿತ್ತು. ತಂಡದಲ್ಲಿ ಉಮೇಶ್ ಯಾದವ್ ಗೆ ಸಿಕ್ಕಿದಷ್ಟು ಅವಕಾಶಗಳು ನಟರಾಜನ್ ಅವರಿಗೆ ಎಂದಿಗೂ ಸಿಕ್ಕಲಿಲ್ಲ. ಫೈನಲ್ ಪಂದ್ಯದಲ್ಲೂ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಶಕ್ತರಾಗಿರುವ ಅಶ್ವಿನ್ ಬದಲಾಗಿ ಉಮೇಶ್ ಯಾದವ್ ಅವರಿಗೆ ಅವಕಾಶ ನೀಡಲಾಯಿತು!

ಕ್ರಿಕೆಟ್ನಲ್ಲಿರುವ ಮತ್ತೊಂದು ತಾರತಮ್ಯ ಬ್ಯಾಟ್ಸಮನ್ ಮತ್ತು ಬೌಲರ್ ಗಳಿಗೆ ಸಂಬಂಧ ಪಟ್ಟಿದ್ದು. ಕ್ರಿಕೆಟ್ ಬ್ಯಾಟ್ಸಮನ್ ಗಳ ಕ್ರೀಡೆ. ಈ ಕ್ರೀಡೆಯಲ್ಲಿ ಬ್ಯಾಟ್ಸಮನ್-ಬೌಲರ್ ಗಳನ್ನ ಅಳೆಯುವ ಮಾಪನವೇ ಬೇರೆ. ಬ್ಯಾಟ್ಸಮನ್ ಗಳಿಗೆ 20 ರಿಂದ 30 ಅವಕಾಶಗಳು ದೊರೆತರೆ, ಬೌಲರ್ ಗಳಿಗೆ ಐದು ಅವಕಾಶಗಳು ಸಿಕ್ಕಬಹುದು. ಅಶ್ವಿನ್ ನಂತಹ ದಕ್ಷಿಣ ಭಾರತದವರಿಗೆ ಮೂರೂ ಅಥವಾ ಎರಡು ಅವಕಾಶಗಳು ಸಿಗಬಹುದಷ್ಟೆ!

ಕ್ರಿಕೆಟ್ನಲ್ಲಿ ಒಂದು ಮಾತಿದೆ- Horses for courses ಎಂದು. “ಅಂದು ಗೆಲ್ಲುವ ಕುದುರೆಯನ್ನೇ ಓಡಿಸು ಎಂದು ಅದರರ್ಥ. ಆದರೆ ಅಚ್ಚರಿ ಎಂಬಂತೆ ಈ ನಿಯಮ ಬರಿ ಬೌಲರ್ಸ್ ಗಳಿಗೆ ಮಾತ್ರ ಅನ್ವಯವಾಗುತ್ತದೆ. ಉತ್ತಮ ಬೌಲರ್ ಗಳನ್ನ ಕಾರಣವಿಲ್ಲದೆ ತಂಡ ದಿಂದ ಕೈಬಿಟ್ಟರೆ, ಬ್ಯಾಟ್ಸ್ಮನ್ ಕಳಪೆ ಪ್ರದರ್ಶನ ನೀಡಿದರು ಹೆಚ್ಚು ಅವಕಾಶಗಳು ಸಿಗುತ್ತಲೇ ಇರುತ್ತದೆ. (ಕೆ.ಎಲ್ ರಾಹುಲ್ ನೆನಪಿಸಿಕೊಳ್ಳಿ)

“ನಾನು ಭಾರತೀಯ ತಂಡಕ್ಕೆ ಆಯ್ಕೆಯಾದ ದಿನವೇ ನನಗೆ ತಿಳಿದಿತ್ತು ನನಗೆ ಗರಿಷ್ಟ ಎರಡು ಅವಕಾಶಗಳು ಸಿಗಬಹುದೆಂದು. ನಾನು ಸಿದ್ಧನಿದ್ದೆ. ನಾನು ವಿಫಲನಾಗಿ, ಮನೆಗೆ ತೆರಳಿ, ಅವರಿಗೆ 30 ಅವಕಾಶಗಳು ಸಿಕ್ಕವು ನನಗೆ ಎರಡು ಚಾನ್ಸ್ ಮಾತ್ರ ನೀಡಿದರೆಂದು ದೂರುತ್ತಾ ಕೂರಲು ಸಿದ್ಧನಿರಲಿಲ್ಲ” ಎಂದು ಅಶ್ವಿನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಶ್ವಿನ್ ಅವರ ಹರೆಯದ ದಿನಗಳಲ್ಲಿ ಒಮ್ಮೆ ಭಾರತ – ಶ್ರೀಲಂಕಾ ಪಂದ್ಯವನ್ನ ನೋಡುತ್ತಿದ್ದರಂತೆ. ಶ್ರೀಲಂಕಾ ದಾಂಡಿಗರು ಭಾರತೀಯ ಬೌಲರ್ ಗಳನ್ನ ಹಿಗ್ಗಾಮುಗ್ಗಾ ಥಳಿಸುತ್ತಿದ್ದ ದೃಶ್ಯ ನೋಡಿ “ನಾನು ಬೌಲರ್ ಆಗುವೆ” ಎಂದು ಸಂಕಲ್ಪ ಮಾಡಿದರಂತೆ. ಅವರು ಅಂದು ಮಾಡಿದ ಸಂಕಲ್ಪ ಸರಿಯಿತ್ತೆ? ಐಸಿಸಿ ವಿಶ್ವ ರಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿದ್ದರು ಅವರಿಗೆ ತಂಡದಲ್ಲಿ ಸ್ಥಾನ ನೀಡದಿರುವುದನ್ನ ಗಮನಿಸಿದರೆ, ಅಶ್ವಿನ್ ಅವರ ನಿರ್ಧಾರ ಪ್ರಮಾದವೆ ಆಗಿತ್ತೆಂದರೆ ತಪ್ಪಿಲ್ಲ. ” When I hang my boots, the first thing I will regret is having been such a fine batter and I should have never become a bowler.” ಎಂಬ ಹತಾಶೆಯ ಮಾತುಗಳು ಇದಕ್ಕೆ ಪೂರಕ.

ಮೇಲ್ವರ್ಗ, ಮೇಲ್ಜಾತಿಯಿಂದ ಬಂದವರಿಗೆ ಇಂತಹ ತಾರತಮ್ಯ, ಹತಾಶೆಯ ಅನುಭವವಾಗುವುದು ತೀರಾ ವಿರಳ. ಅಶ್ವಿನ್ ಅವರಿಗೆ ಕ್ರಿಕೆಟ್ ಕ್ರೀಡೆ ಏನೆಲ್ಲಾ ಕೊಟ್ಟರು ಸಕತ್ ಅವಮಾನವನ್ನೂ ಉಣಬಡಿಸಿದೆ. ಇದು ತಾರತಮ್ಯ ಪಸರಿಸಲೆಂದೇ ಬ್ರಿಟಿಷರು ಹುಟ್ಟುಹಾಕಿದ ಕ್ರಿಕೆಟ್ ನಲ್ಲಿ ಮಾತ್ರ ಸಾಧ್ಯ

ಹರೀಶ್ ಗಂಗಾಧರ್

Leave a Reply

Your email address will not be published. Required fields are marked *