ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ವಿಚಾರ ತಿಳಿಕ ಕೂಡಲೇ ಕಣ್ಣೀರಿಡುತ್ತಾ ಗುರುಪ್ರಸಾದ್ 2ನೇ ಪತ್ನಿ ಸುಮಿತ್ರ ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಧಾವಿಸಿದ್ದಾರೆ.
ಎರಡನೇ ಹೆಂಡತಿಯ ಒಪ್ಪಿಗೆಯ ಮೇರೆಗೆ ಮೃತದೇಹವನ್ನು ಪೊಲೀಸರು ಅಪಾರ್ಟ್‌ಮೆಂಟಿನಿಂದ ಕೆಳಗಿಳಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಮಾಡಿಸಲು ಮೃತದೇಹವನ್ನು ರವಾನಿಸಲಾಗಿದೆ.
ಕಾರಾನಾಂತರಗಳಿಂದ ಗುರುಪ್ರಸಾದ್ ಮೊದಲ ಪತ್ನಿಯಿಂದ ವಿಚ್ಚೇಧನ ಪಡೆದು, ಕಳೆದ ವರ್ಷವಷ್ಟೇ ಎರಡನೇ ವಿವಾಹವಾಗಿದ್ದರು.ಇತ್ತೀಚೆಗಿನ ದಿನಗಳಲ್ಲಿ ಎರಡನೇ ಪತ್ನಿಯಿಂದಲೂ ಅಂತರ ಕಾಯ್ದುಕೊಂಡಿದ್ದರು. ಆದ್ದರಿಂದ 2-3 ತಿಂಗಳಿನಿಂದ ಪತ್ನಿ ಮತ್ತು ಮಗು ತವರು ಮನೆಯಲ್ಲಿದ್ದರು ಎನ್ನಲಾಗಿದೆ.