ದೇವನಹಳ್ಳಿ: ಸ್ಥಳೀಯ ಶಾಸಕ, ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ, ಕದ್ದುಮುಚ್ಚಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯೊಳಗೆ ನುಸುಳಿ, ಸಾರ್ವಜನಿಕರು ಬಂದಾಗ ಕಳ್ಳನಂತೆ ತಪ್ಪಿಸಿಕೊಂಡು ಹೋದ ಘಟನೆ, ಇಂದು ದೇವನಹಳ್ಳಿಯ ಸಬ್‌ ರಿಜಿಸ್ಟ್ರಾರ್‌ ಆಫೀಸಿನಲ್ಲಿ ನಡೆದಿದೆ.

ಸರ್ಕಾರಿ ನೌಕರರ ಮುಷ್ಕರದ ವೇಳೆ ಶಾಸಕ ನೊಂದಣಿ ಕಚೇರಿಗೆ ತೆರಳಿ ಬಾಗಿಲು ಹಾಕಿಕೊಂಡು ಅಕ್ರಮ ನೊಂದಣಿಗೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯರು ಹೇಳುವ ಪ್ರಕಾರ, ʼಇದೇ ಮೊದಲೇನಲ್ಲ, ಅಧಿಕಾರಿಗಳನ್ನು ಹೆದರಿಸಿ-ಬೆದರಿಸಿ ಹಲವು ಬಾರಿ ಇಂತಹ ಅಕ್ರಮ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಾ ಬಂದಿದ್ದಾರೆ.ʼ ಎಂದು ಶಾಸಕರ ಈ ಭ್ರಷ್ಟಾಚಾರದ ವಿರುದ್ದ ಸಾರ್ವಜನಿಕರು ಗಂಭೀರ ಆರೋಪ ವ್ಯಕ್ತಪಡಿಸಿದರು.

ಶಾಸಕರು ದೇವನಹಳ್ಳಿ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಅಕ್ರಮ ರಿಜಿಸ್ಟ್ರೇಷನ್ ವಿಷಯ ಶರವೇಗದಲ್ಲಿ ಮುಟ್ಟುತಿದ್ದಂತೆ ನೂರಾರು ಸಾರ್ವಜನಿಕರು ಕಚೇರಿ ಬಳಿ ಜಮಾಯಿಸಿ ಶಾಸಕರ ವಿರುದ್ದ ಪ್ರತಿಭಟಿಸಿದರು. ಅಲ್ಲದೆ, ನಿಸರ್ಗ ನಾರಾಯಣಸ್ವಾಮಿ ಅವರನ್ನು ಒಳಗೆ ಕೂಡಿಹಾಕಿ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಲ್ಪ ಸಮಯದ ನಂತರ ಅವರ ಗನ್ ಮ್ಯಾನ್ ಬಾಗಿಲು ತೆರೆದ ಕಾರಣ ಹೊರಗೆ ಬಂದರು.

ಅಧಿಕಾರಿಗಳು ಗೈರು ಹಾಜರಿದ್ದರೂ, ಎಫ್‌ಡಿಎ ಸಿಬ್ಬಂದಿಯ ಸಹಾಯದಿಂದ ಅಕ್ರಮ ರಿಜಿಸ್ಟ್ರೇಷನ್ ಮಾಡಿಸುವ ಉದ್ದೇಶವೇನಿತ್ತು? ದೇವನಹಳ್ಳಿ ತಾಲ್ಲೂಕು ಅಬಿವೃದ್ದಿಯನ್ನು ಕಡೆಗಣಿಸಿ, ಸ್ವಯಂ ಖಜಾನೆ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಅದೂ ಬೆಳಿಗ್ಗೆ 9:30ಕ್ಕೆ ಸರಿಯಾಗಿ ಸಬ್ ರಿಜಿಸ್ಟರ್ ಕಚೇರಿಗೆ ಶಾಸಕರು ಬರುವ ಉದ್ದೇಶವೇನಿದೆ. ಅದಧಿಕಾರಿಗಳೇ ಇಲ್ಲದ ಸಂದರ್ಭದಲ್ಲಿ ಕಛೇರಿ ಬಾಗಿಲು ಹಾಕಿಕೊಂಡು ಹೆಣ್ಣು ಮಹಿಳೆಗೆ ನ್ಯಾಯ ಕೊಡಿಸುವ ಪ್ರಸಂಗವಾದರು ಏನು?

ಕಳೆದ ಐದು ವರ್ಷಗಳ ಅವಧಿಯಲ್ಲಿ ನಿಸರ್ಗ ನಾರಾಯಣಸ್ವಾಮಿ ಅಭಿವೃದ್ಧಿ ಕೆಲಸಗಳು ‌ಶೂನ್ಯ. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆಯ ದಂಧೆಯಲ್ಲಿ ಮುಳುಗಿದ್ದರು, ಅಭಿವೃದ್ದಿಯನ್ನು ‌ಮರೆತು ತಾಲ್ಲೂಕಿನಾದ್ಯಂತ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಬಡವರ ಆಸ್ತಿಗೆ ಚಿಲ್ಲರೆ ಕಾಸುಕೊಟ್ಟು ಮೋಸ ಮಾಡಿ ಅಕ್ರಮ ಲೇಔಟ್ ನಿರ್ಮಾಣದಲ್ಲಿ ನಿರತರಾಗಿದ್ದಾರೆ. ಜನರ‌ ಹಿತಕ್ಕಿಂತ ಸ್ವಹಿತಾಸಕ್ತಿಯೇ ಇವರಿಗೆ ಪ್ರಮುಖವೆನಿಸಿದೆ. ತಾಲ್ಲೂಕಿನಲ್ಲಿ ರಾಜ ಕಾಲುವೆ, ಕೆರೆ-ಕುಂಟೆ, ಗುಂಡುತೋಪು, ಸಾರ್ವಜನಿಕರ‌ ಅನುಕೂಲಕ್ಕಾಗಿ‌ ಮೀಸಲಿಟ್ಟ ಆಸ್ತಿಗಳನ್ನು ಜೆಡಿಎಸ್ ಪಕ್ಷದ ಅಧ್ಯಕ್ಷ ಮುನೇಗೌಡ, ಸೇರಿದಂತೆ ಶಾಸಕರ ಹಿಂಬಾಲಕರ ಪಾಲಾಗಿದೆ‌ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷ ಬಿ.ಕೆ.ಶಿವಪ್ಪ ಕಿಡಿಕಾರಿದರು.

-ವರದಿ: ಜಗದೀಶ್‌
ಪತ್ರಕರ್ತರು, ದೇವನಹಳ್ಳಿ

Leave a Reply

Your email address will not be published. Required fields are marked *