ಬೆಂಗಳೂರು: ಮಾನ್ಯ ಕುಮಾರಸ್ವಾಮಿಯವರಿಗೆ ಮೋದಿಯವರು ನಿಮಗೆ ಒಳ್ಳೇಯ ಖಾತೆಯನ್ನು ನೀಡಿದ್ದಾರೆ. ಇದನ್ನು ಸದುಪಯೋಗಿಸಿಕೊಂಡು ರಾಜ್ಯದ ಜನತೆಗೆ ಉದ್ಯೋಗವನ್ನು ನೀಡಿ ಎಂದು ಡಿಸಿಎಂ.ಡಿ.ಕೆ.ಶಿವಕುಮಾರ್ ತಿಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಜನತೆಗೆ ಉದ್ಯೋಗವನ್ನು ನೀಡುವುದರ ಮೂಲಕ ನಿರುದ್ಯೋಗ ಮುಕ್ತ ರಾಜ್ಯವನ್ನಾಗಿ ಮಾಡಲಿ, ಆ ಮಹಾನ್ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಕೂಡ ಕೈ ಜೋಡಿಸುತ್ತದೆ ಮತ್ತು ಅದಕ್ಕೆ ಅಗತ್ಯವಾದ ಸಹಾಯವನ್ನು ಮಾಡುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಉಕ್ಕು, ಕೈಗಾರಿಕೆಯಂತಹ ಉತ್ತಮವಾದ ಖಾತೆಯನು ನೀಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಉದ್ಯೋಗಗಳನ್ನು ನೀಡುವಂತಹ ಕೆಲಸವನ್ನು ಮಾಡುವುದರ ಮೂಲಕ ಜನತೆಗೆ ಒಳ್ಳೆಯದನ್ನು ಬಯಸಲಿ ಅದನ್ನು ಬಿಟ್ಟು ಅನಾವಶ್ಯಕ ಹೇಳಿಕೆಗಳನ್ನು ನೀಡುತ್ತಾ ಅವಕಾಶವಂಚಿತರಾಗಬೇಡಿ ಎಂದಿದ್ದಾರೆ.