ಮೈಸೂರು: ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದ ಪವಿತ್ರತೆಯು ರಾಜಕಾರಣದ ಚಮಚಾಗಿರಿಯ ಭಾಷಣದಿಂದ ಹಾಳಾಗಿದೆ ಎಂದು ವಿದಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ದಸರಾಉದ್ಘಾಟನಾ ಸಮಾರಂಭದಲ್ಲಿ ರಾಜಕಾರಣದ ಕುರಿತಾದ ಮಾತುಗಳು ಬೇಡವಾಗಿದ್ದವು. ಈ ಹಿಂದೆ ಇದೇ ಸಿದ್ದರಾಮಯ್ಯನವರು ತಾಯಿ ಚಾಮುಂಡಿಯ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದು ಈ ಬಾರಿ ಚಾಮುಂಡಿ ತಾಯಿಯ ಹೆಸರನ್ನು ಹೇಳುತ್ತಾ ಆಶೀರ್ವಾದವನ್ನು ಬೇಡುತ್ತಿದ್ದು ನಾನೇನು ತಪ್ಪು ಮಾಡಿಲ್ಲವೆಂದು ಪದೇ ಪದೇ ಹೇಳುತ್ತಿದ್ದರೆಂದರೆ ಅದರ ಮರ್ಮವೇನೆಂದು ಪ್ರಶ್ನಿಸಿದ್ದಾರೆ.

ದಸರಾ ಉದ್ಘಾಟಿನೆ ಮಾಡಿದ ಸಾಹಿತಿ ಹಂಪನ ನಾಗರಾಜಯ್ಯನವರೂ ದಸರಾ ಇತಿಹಾಸದ ಬಗ್ಗೆ, ಭಕ್ತಿಭಾವದ ಬಗ್ಗೆ, ನಾಡಹಬ್ಬದ ಐತಿಹಾಸಿಕತೆಯ ಬಗ್ಗೆ ಮಾತನಾಡದೇ ರಾಜಕೀಯ ಭಾಷಣವನ್ನು ಮಾಡುವ ಮೂಲಕ ದಸರಾಉದ್ಘಾಟನಾ ಸಮಾರಂಭದ ಪಾವಿತ್ರತೆಯನ್ನು ಹಾಳುಮಾಡಿದ್ದಾರೆ. ಮುಡಾ ಫಲಾನುಭವಿಗಳಾದ ಜಿಟಿ ದೇವೇಗೌಡ ಮತ್ತು ಸಿದ್ದರಾಮಯ್ಯರನ್ನು ಹೊಗಳುವ ಅವಶ್ಯಕತೆಯಿರಲಿಲ್ಲ. ರಾಜಕೀಯವನ್ನು ತಂದು  ಇಡೀ ಕಾರ್ಯಕ್ರಮವನ್ನು ಗೊಂದಲಮಯವನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Leave a Reply

Your email address will not be published. Required fields are marked *