ಬೆಂಗಳೂರು: ನಟ ದರ್ಶನ್ಗೆ ಹೈಕೋರ್ಟ್ ಕೆಲವು ಕಂಡೀಷನ್ ಹಾಕಿ ಮಧ್ಯಂತರ ಬೇಲ್ ಮಂಜೂರು ಮಾಡಿದೆ.
ನಟ ದರ್ಶನ್ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್ ಪರವಾಗಿ ವಾದ ಮಾಡುವ ಲಾಯರ್ ನೀಡಿರುವ ಆರೋಗ್ಯ ಸಮಸ್ಯೆಯ ಕಾರಣದಿಂದ ಮಾನವೀಯತೆ ದೃಷ್ಟಿಯಿಂದ ನ್ಯಾಯಾಲಯ ಆರು ತಿಂಗಳುಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.
ಜಾಮೀನು ನೀಡುವ ಮುನ್ನ ಕೋರ್ಟ್ ವಿಧಿಸಿದ ಷರತ್ತುಗಳು ಹೀಗಿವೆ
ಬೆನ್ನುನೋವಿನಲ್ಲಿ ಬಳಲುತ್ತಿರುವ ದರ್ಶನ್ಗೆ ಶಸ್ತ್ರಚಿಕಿತ್ಸೆ ಮಾಡಿಸುವ ಅಗತ್ಯವಿರುವ ಹಿನ್ನಲೆಯಲ್ಲಿ ಡಾಕ್ಟರ್ ನೀಡಿದ ರಿಪೋರ್ಟ್ ಆಧಾರದ ಮೇರೆಗೆ ಆರು ವಾರ ಮಧ್ಯಂತರ ಜಾಮೀನು ಚಾಲ್ತಿಯಲ್ಲಿರುತ್ತದೆ.
ದರ್ಶನ್ ತಮ್ಮ ಬೆನ್ನುನೋವು ಸಮಸ್ಯೆಗೆ ತಾವು ಹೇಳಿದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ಸೂಚಿಸಿದೆ.
ನಟ ದರ್ಶನ್ ತಮ್ಮ ಬಳಿಯಿರುವ ಪಾಸ್ ಪೋರ್ಟ್ನ್ನು ವಿಚಾರಣಾ ಕೋರ್ಟಿಗೆ ಹ್ಯಾಂಡ್ವರ್ ಮಾಡ್ಬೇಕು.
ಚಿಕಿತ್ಸೆ ಪಡೆಯುವ ಪ್ರತಿಯೊಂದು ಅಪ್ಡೇಟ್ಸ್ಗಳನ್ನು ಮತ್ತು ವರದಿಗಳಲ್ಲಿ ವಾರಕ್ಕೆ ಒಂದು ಬಾರಿ ಕೋರ್ಟಿಗೆ ಸಲ್ಲಿಸಬೇಕು .
ಸಾಕ್ಷಿ ನಾಶ ಮಾಡಬಾರದು ಮತ್ತು ಸಾಕ್ಷಿಗಳನ್ನು ಸಂಪರ್ಕಿಸಬಾರದು.
ಸಾಕ್ಷಿಗಳ ಮೇಲೆ ಪ್ರತ್ಯಕ್ಷವಾಗಿ ಆಗಲೀ, ಪರೋಕ್ಷವಾಗಿ ಆಗಲೀ ಬೆದರಿಕೆಯನ್ನು ಹಾಕಬಾರದು.
ಕೋರ್ಟ್ ನೀಡಿರುವ ಜಾಮೀನನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬ ಷರತ್ತುಗಳನ್ನು ನೀಡಿದೆ.