ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿರುವ ದರ್ಶನ್‌ಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ ನಂತರ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ದರ್ಶನ್‌ ಫ್ಯಾನ್ಸ್‌ಪೇಜ್‌ನಲ್ಲಿ “ಡೆವಿಲ್‌ ಈಸ್‌ ಬ್ಯಾಕ್‌ “ ಎಂಬ ವಿಡಿಯೋವೊಂದನ್ನು ಶೇರ್‌ ಮಾಡುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ

ಎಲ್ಲಾ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ಡಿಬಾಸ್‌ ಬಿಡುಗಡೆಯಾಗುತ್ತಿರುವುದು ಸಿಕಿತ್ಸೆಯ ಸಲುವಾಗಿ ಆದ್ದರಿಂದ ಅಭಿಮಾನಿಗಳು ದರ್ಶನ್‌ರವರ ಮನೆ ಮುಂದೆ ಪಟಾಕಿ ಹೊಡೆಯುವುದು, ಕೂಗಾಡುವುದು, ಮಾಡುವಂತಿಲ್ಲ, ಹಾಗೂ ಮಾಧ್ಯಮಗಳಿಗೆ ಬೇರೆ ನಟರಿಗೆ, ಪೊಲೀಸ್‌ ಅಧಿಕಾರಿಗಳ ಬಗ್ಗೆ ಹಗುರವಾಘಿ ಮಾತನಾಡುವಂತಿಲ್ಲ ಎಂಬ ಪೋಸ್ಟ್‌ನ್ನು ಕೂಡಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *