ಚಿತ್ರದುರ್ಗ ಮೂಲದ ರೇಣಿಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ದರ್ಶನ್‌ಗೆ ಆರೋಗ್ಯದ ಸಮಸ್ಯೆಯ ಕಾರಣ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಸದ್ಯ ನಟ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಪರೀತ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ದರ್ಶನ್‌ಗೆ ಜಾಮೀನು ಮಂಜೂರು ಆಗಿರುವ ವಿಷಯ ತಿಳಿದ ಪವಿತ್ರಾ ಗೌಡ ನನಗೂ ಕೂಡ ಜಾಮೀನು ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಇನ್ನೂ ಬೇಲ್ ಸಿಕ್ಕಲ್ಲ. ದರ್ಶನ್ ಗೆ ಬೇಲ್ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಪವಿತ್ರಾಗೌಡ ಸಂತಸ ಪಟ್ಟಿದ್ದು, ನನ್ನಿಂದ ಜೈಲು ಸೇರುವ ಹಾಗಾಯ್ತು ಅಂತೂ ಜಾಮಿನು ಸಿಕ್ಕಿತು. ಎಂದುನಿರಾಳವಾಗಿದ್ದಾರೆ.
ಪವಿತ್ರಾಗೌಡಗೆ ಜಾಮೀನು ನಿರಾಕರಣೆಯಾಗಿರುವುದರಿಂದ ಪರಪ್ಪನ ಅಗ್ರಾಹಾರದಲ್ಲಿಯೇ ಇದ್ದಾರೆ.ಮೊದಲಿನಿಂದಲೇ ಪವಿತ್ರಾ ಜಾಮೀನಿಗಾಗಿ ಪ್ರಯತ್ನ ಮಾಡ್ತಿದ್ದರು.ಆದಾದ ನಂತರ ದರ್ಶನ್‌ರವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ.