ಸರಿಸುಮಾರು ಮೂರು ತಿಂಗಳಿಂದ ಒಳಮೀಸಲಾತಿಗಾಗಿ ಹೋರಾಡುತ್ತಿರುವ ಪ್ರತಿಭಟನಾಕಾರು ಇಂದು ಮುಖ್ಯಮಂತ್ರಿ ಬೊಮ್ಮಾಯಿಯವರ ಸಾಂಕೇತಿಕ ತಿಥಿ ಮಾಡಿ, ತಿಥಿಯೂಟ ಸವಿದ ಪ್ರತಿಭಟಿಸಿದ್ದಾರೆ.
40 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಹೋರಾಟಗಾರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಬಜೆಟ್ ಅಧಿವೇಶನ ಮುಗಿದ ಮೇಲೂ ಸರ್ಕಾರ ಒಳಮೀಸಲಾತಿಗೆ ಸಂಬಂಧಿಸಿದಂತೆ ಶಿಫಾರಸ್ಸನ್ನು ಕೇಂದ್ರಕ್ಕೆ ಕಳಿಸದೆ, ನಿರ್ಲಿಪ್ತತೆ ತೋರಿರುವ ಕ್ರಮವನ್ನು ಖಂಡಿಸಿ, ಇಂದು ಧರಣಿ ನಿರತ ಸ್ಥಳದಲ್ಲಿ ಬೊಮ್ಮಾಯಿ ಅವರ ಫೋಟೋ ಇಟ್ಟು, ಎಡೆಯನ್ನ ಮಾಡಿ ತಿಥಿ ಮಾಡಿ, ಸಾಂಕೇತಿಕವಾದ ಆಕ್ರೋಶವನ್ನು ಹೊರಹಾಕಿದ್ದಾರೆ. ನಂತರ ಸಾಮೂಹಿಕವಾಗಿ ತಿಥಿಯೂಟ ಸವಿಯುವ ಮೂಲಕ, ಬಿಜೆಪಿ ಸರ್ಕಾರ ಸತ್ತಿದೆ ಎಂದು ಘೋಷಿಸಿದ್ದಾರೆ.!