ಮಂಡ್ಯ: ರಾಜ್ಯ ರಾಜಕೀಯವಲ್ಲ ಜಾತಿ ರಾಜಕೀಯ ಎನ್ನುವ ಹಾಗೆ ಆಗಿದೆ. ನೀನು ಆ ಜಾತಿ ನಾನು ಈ ಜಾತಿ ಎಂದು ಹೇಳಿಕೊಂಡು ರಾಜಕೀಯ ನಾಯಕರು ತಮ್ಮ ಸಣ್ಣ ಬುದ್ದಿಯನ್ನು ಜನರ ಮುಂದೆ ಬಯಲು ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ನಾನು ಮುಂದಿನ ಜನ್ಮದಲ್ಲಿ ʻಗೌಡʼ ಆಗಿ ಅಥವಾ ಹಿಂದೂ ಆಗಿ ಹುಟ್ಟುತ್ತೇನೆ ಎಂದು ಮತ್ತೆ ಜಾತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಸಿಟಿ ರವಿ.
ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯನಿಗೆ ಕುಂಕುಮವನ್ನ ನೋಡಿದ್ರೆ ಭಯವಾಗುತ್ತದಂತೆ, ಎಂದಿದ್ದಾರೆ ಆದರೆ ಕುಂಕುಮ ಇಡುವವರ ವೋಟ್‌ಗಳು ಮಾತ್ರ ಬೇಕಂತೆ, ಕುಂಕುಮ ಇಡುವವರು ಕಾಂಗ್ರೆಸ್‌ಗೆ ವೋಟ್ ಹಾಕಬಾರದು ಎಂದು ಹೇಳಿದ್ದಾರೆ.
ಹೆಚ್.ಡಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲೀಂ ಆಗಿ ಹುಟ್ಟುತ್ತಾರಂತೆ ಆದರೆ ಮುಂದಿನ ಜನ್ಮ ಅಂತ ಇರೋದು ನಮ್ಮ ಹಿಂದೂ ಧರ್ಮದಲ್ಲಿ ಮಾತ್ರ. ಮುಸ್ಲಿಮ್ ಧರ್ಮದಲ್ಲಿ ಪುನರ್ಜನ್ಮ ಅನ್ನೋ ಯೋಚನೆಯೇ ಇಲ್ಲ. ಆದರೆ ನಾನ್ ಮಾತ್ರ ಮುಂದಿನ ಜನ್ಮದಲ್ಲಿ ಗೌಡ ಆಗಿ ಅಥವಾ ಹಿಂದೂ ಆಗಿ ಹುಟ್ಟಬೇಕೆಂಬ ಆಸೆಯಿದೆ.
ಇನ್ನು ನಾನು ಮಾಂಸ ತಿಂದಿದ್ದು ನಿಜ, ಆದ್ರೆ ದೇವಸ್ಥಾನಕ್ಕೆ ಹೋಗಿದ್ದೆನೆಂಬುದು ಸುಳ್ಳು ಎಂದು ತನ್ನ ಮೇಲಿರುವ ಆರೋಪಕ್ಕೆ ಸ್ಪಷ್ಟನೆಯನ್ನು ನೀಡುವುದರ ಜೊತೆಗೆ, ನಾನು ಸಿದ್ದರಾಮಯ್ಯನ ತರ ಮಾಂಸ ಸೇವಿಸಿ ದೇವಸ್ತಾನಕ್ಕೆ ಹೋಗುತ್ತೇನೆ ಎಂದು ಹುಂಬತನ, ದಾರ್ಷ್ಯತೆ ನನಗಿಲ್ಲ ನಾನು ಸಂಪ್ರದಾಯಬದ್ದವಾಗಿ ಬೆಳೆದವ ಎಂದು ಹೇಳಿಕೆ ಕೊಟ್ಟರು.