ಚೆನೈ: ಪರಿಸರದ ಮಾಲಿನ್ಯದ ಬಗ್ಗೆ ಚಿಂತೆ ಮಾಡದೆ ಹೆಚ್ಚೆಚ್ಚು ಪಟಾಕಿಗಳನ್ನು ಖರೀದಿಸಿ ಹಬ್ಬವನ್ನು ಆಚರಿಸಿ ಎಂದು ಬಿಜೆಪಿ ನಾಯಕ ಅಣ್ಣಾಮಲೈತಿಳಿಸಿದ್ದಾರೆ.

ಪಟಾಕಿ ಸಿಡಿಸುವ ಬಗ್ಗೆ ಪೋಸ್ಟ್‌ ಹಾಕಿರುವ ಅವರು ಪಟಾಕಿಯನ್ನು ಯಾಕೆ ಸಿಡಿಸಬೇಕೆಂದು ವಿವರಣೆಯನ್ನೂ ಕೂಡಾ ನೀಡಿದ್ದಾರೆ.

ಪರಿಸರಕ್ಕೆ ಇಂಗಾಲದ ಡೈ ಆಕ್ಸೈಡ್‌ನ್ನು ಬಿಡುಗಡೆಮಾಡುವಲ್ಲಿ ಭಾರತವೈ 125ನೇ ಸ್ಥಾನದಲ್ಲಿದ್ದು, ಯುಎಸ್‌ 16ನೇ ಸ್ಥಾನದಲ್ಲಿದ್ದರೆ, ಚೀನಾ 25ನೇ ಸ್ಥಾನದಲ್ಲಿದೆ.ನಾವು ಒಂದೇ ಒಂದು ದಿನ ಪಟಾಕಿಯನ್ನು ಹೊಡೆಯುವ ವಿಷಯದ ಬಗ್ಗೆ ಚರ್ಚಿಸುತ್ತಿದ್ದೇವೆ. ಈ ಪಟಾಕಿ ತಯಾರಿಕ ಉದ್ದಯಮವನ್ನು ನಂಬಿಕೊಂಡು 8 ಲಕ್ಷ ಜನರಿದ್ದಾರೆ. ನಮಗಾಗಿ ತಯಅರಿಸುವ ಪಟಾಕಿಗಳನ್ನು ಕೊಂಡುಕೊಂಡು ಯಾಕೆ ಹಬ್ಬವನ್ನು ಆಚರಿಸಬಾರದು ಎಂದು ಪ್ರಶ್ನಿಸಿದ್ದಾರೆ.

ನಮ್ಮ ಶಿವಕಾಶಿ ಜನರ ಆರ್ಥಿಕತೆ.ನಮ್ಮ ಸಂತೋಷಕ್ಕಾಗಿ ತಯಾರಿಸುವ ಪಟಾಕಿಗಳನ್ನು ಖರೀದಿಸಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ .ಒಂದೇ ಒಂದು ದಿನ ಪಟಾಕಿ ಸಿಡಿಸಿದರೆ ಏನೂ ಆಗುವುದಿಲ್ಲ.ದೀಪಾವಳಿ ಸಮಯದಲ್ಲಿ ಬಂದ ಆದಾಯದಿಂದ ಸಾಲವನ್ನು ತೀರಿಸಿಕೊಳ್ಳುವ ಕನಸನ್ನು ಕಂಡಿರುವ ವ್ಯಾಪಾರಿಗಳ ಕನಸನ್ನು ನನಸು ಮಾಡೋಣ ಎಂದು ಹೇಳಿದ್ದಾರೆ.

ಪಟಾಕಿ ಸಿಡಿಸುವ ವೇಳೆ ಅತ್ಯಂತ ಜಾಗರೂಕರಾಗಿರಬೇಕು.ಯಾವ ಜೀವರಾಶಿಗೂ ತೊಂದರೆಯಾಗದಂತೆ ಎಚ್ಚರ ವಹಿಸಬೇಕೆಂದು ಹೇಳುವ ಮೂಲಕ ದೀಪಾವಳಿ ಹಬ್ಬ ಪ್ರತಿಯೊಬ್ಬರ ಬಾಳಲ್ಲಿ ಬೆಳಕನ್ನು ಚೆಲ್ಲಲಿ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *