ದೇಶೀಯ ಹಸುಗಳಿಗೆ ರಾಜ್ಯಮಾತಾ-ಗೋಮತಾ ಸ್ಥಾನಮಾನವನ್ನು ನೀಡಲು ಮಹಾರಾಷ್ಟ್ರ ಸರ್ಕಾರ ಘೋಷಿಸಿದ್ದು ವಿಧಾನಸಭಾ ಚುನಾವಣೆಯ ಮುನ್ನವೇ ಈ ನಿರ್ಧಾರವನ್ನು ತೆಗೆದುಕೊಂಡ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ.
ಕೃಷಿ, ಹೈನುಗಾರಿಕೆ ಅಭಿವೃದ್ದಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಇಂದು(ಸೋಮವಾರ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ನಮ್ಮ ಪೂರ್ವಜರ ಕಾಲದಿಂದಲೂ ಗೋವನ್ನು ಪೂಜಿಸುತ್ತಾ ಬಂದಿದ್ದಾರೆ. ಮನುಷ್ಯರ ಆಹಾರ ಕ್ರಮದಲ್ಲಿ ಹಸುವಿನ ಹಾಲು ತುಂಬಾ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಆಯುರ್ವೇದ ಔಷಧಿಗಳಲ್ಲಿ ಹಸುವಿನ ಸಗಣಿ ಹಾಗೂ ಗಂಜಲ(ಗೋಮೂತ್ರ)ದ ಪ್ರಮುಖ ಸ್ತಾನ ಪಡೆದುಕೊಂಡಿದೆ. ಆದ್ದರಿಂದ ಹಸುಗಳಿಗೆ ರಾಜ್ಯಮಾತಾ-ಗೋಮತಾ ಸ್ಥಾನಮಾನವನ್ನ ನೀಡಲು ಅನುಮೋದನೆಯನ್ನು ನೀಡಿದೆ.
ಇದೇ ವೇಳೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳು(ದೇವೇಂದ್ರ ಫಡ್ನವೀಸ್) ನಮ್ಮ ರೈತರಿಗೆ ಹಸುಗಳು ವರದಾನವಾಗಿವೆ ಆದ್ದರಿಂದ ಹಸುಗಳಿಗೆ ರಾಜ್ಯಮಾತಾ-ಗೋಮತಾ ಸ್ಥಾನಮಾನವನ್ನು ನೀಡುವುದರ ಮೂಲಕ ಗೋಶಾಲೆಗಳನ್ನಿ ದೇಶೀಯ ಹಸುಗಳನು ಹೆಚ್ಚು ಪ್ರಮಾಣದಲ್ಲಿ ಸಾಕಣೆ ಮಾಡಲು ಹಸು ಸಾಕಲು ಸಹಾಯವನ್ನು ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಹಿಂದೂ ಧರ್ಮದಲ್ಲಿ ಹಸುವು ಹಾಲನ್ನು ಕೊಡುವುದರಿಂದ ಅದು ತಾಯಿಯ ಸಮಾನವೆಂದು ಗೋಮಾತಾ ಎಂದು ಕರೆಯುತ್ತಾರೆ.ಗೋವುಗಳು ಅದ್ಯಾತ್ಮಿಕ ಮತತು ಸಾಂಸ್ಕೃತದಲ್ಲೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡು ಜೀವಗಳನ್ನು ಉಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.