ಬೆಂಗಳೂರು: ಕೋವಿಡ್‌ ಸಮಯದಲ್ಲಿ ನಡೆದಿರುವ ಹಗರಣದ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಇವರು, ಕೋವಿಡ್‌ ಸಮಯದಲ್ಲಿ ಆಗಿರುವ ಹಗರಣದ ಬಗ್ಗೆ ನೆನ್ನೆಯಷ್ಟೇ ವರದಿಯನ್ನು ಸಲ್ಲಿಸಲಾಗಿದೆ. ಆ ವರದಿಯಲ್ಲಿ ಏನಿದೆ? ಏನಿಲ್ಲ? ಎನ್ನುವುದು ನನ್ನನ್ನೂ ಸೇರಿ ಮತ್ಯಾರಿಗೂ ತಿಳಿದಿಲ್ಲ. ಈ ವರದಿಯನ್ನು ಬಹಿರಂಗ ಮಾಡುವ ಮೊದಲೇ ಡಾ.ಸುಧಾಕರ್‌ ಅವರಿಗೆ ವರದಿಯಲ್ಲಿ ಏನಿದೆ ಎಂದು ತಿಳಿದಿದೆ ಎಂದರೆ ಏನು ಅರ್ಥ? ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿದರಂತೆ ಹಾಗಾಯ್ತು.ಅವರೊಳಗಿರುವ ಅಪರಾಧಿ ಪ್ರಜ್ಞೆ ಅವರನ್ನು ಈ ರೀತಿ ಮಾತನಾಡುವ ಹಾಗೆ ಮಾಡಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *