ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಇನ್ನೂ ಎರಡು ಆಡಿಯೋಗಳು ಬಾಕಿ ಇವೆ, ಅವುಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚೆಲುವರಾಜ್ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಜ್ , ಮುನಿರತ್ನರವರು ಹನುಮಂತರಾಯಪ್ಪನ ಜೊತೆ 30% ಕಮಿಷನ್ ವಿಷಯದ ಕುರಿತು ಮಾತನಾಡಿರುವ ಆಡಿಯೋಗಳನ್ನು ನಾಳೆ ಬಿಡುಗಡೆಗೊಳಿಸುತ್ತೇನೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಶಾಸಕ ಮುನಿರತ್ನ ನಮಗೆ ಕೊಡಬಾರದ್ದ ಹಿಂಸೆಯನ್ನು ನೀಡಿ, ನನ್ನ ಮತ್ತು ನನ್ನ ಪತ್ನಿಯನ್ನು ಅವಮಾನಿಸಿದ್ದಲ್ಲದೆ ಇನ್ನಿಲ್ಲದಂತೆ ಹಿಂಸಿಸಿದ್ದಾರೆ.ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತದೆಂದು ಹೆದರಿಸಿದ್ದಾರೆ. ಮೃತ ರೇಣುಕಾಸ್ವಾಮಿಯನ್ನು ಕೊಂದಿದ್ದು ಯಾರು ಗೊತ್ತಾ? ನಮ್ಮ ಎಂಎಲ್ಎ ಮುನಿರತ್ನರವರ ಭಾಮೈದ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆದ್ದರಿಂದ ನನಗೆ ನಮ್ಮ ಕುಟುಂಬಕ್ಕೆ ರಕ್ಷಣೆನೀಡಿ ಎಂದು ಬೇಡಿಕೊಂಡು ಕಣ್ಣೀರಿಟ್ಟಿದ್ದಾರೆ.