ಕೊಲ್ಹಾಪುರ: ದೇಶದ ಸಂವಿಧಾನ ಮತ್ತು ಸಂವಿಧಾನಿಕವನ್ನು ಹಾಳುಮಾಡಿದ ನಂತರ ಶಿವಾಜಿ ಮಹಾರಾಜರ ಮುಂದೆ ನಮ್ರವಾಗಿ ತಲೆಬಾಗಿ ನಮಸ್ಕರಿಸಿದರೆ ಏನು ಪ್ರಯೋಜನವಿಲ್ಲವೆಂದು ಬಿಜೆಪಿಯ ವಿರುದ್ದ ರಾಹುಲ್ ಗಾಂಧಿಯವರು ಕಿಡಿಕಾರಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣ ಮಾಡಿದ ನಂತರ ಮಾತನಾಡಿದ ರಾಹುಲ್ ಗಾಂಧಿ, ಸಿಂಧುದುರ್ಗ ಜಿಲ್ಲೆಯಲ್ಲಿರುವ ರಾಜ್ಕೋಟ್ ಕೋಟೆಯಲ್ಲಿರುವಂತಹ ಛತ್ರಪತಿ ಶಿವಾಜಿ ಮಹಾರಾಜ್ರ ಪ್ರತಿಮೆ ಹಾಳಾಗಿ ಉರುಳಿಬಿದ್ದಿರುವ ಘಟನೆಯ ಕುರಿತು ಮಾತನಾಡಿದ ಅವರು ದೇಶದ ಸಂಪತ್ತನ್ನು ಉಳಿಸಿಕೊಳ್ಳದೆ ದ್ವಂಸಮಾಡಿ, ಶಿವಾಜಿ ಮಹಾರಾಜರ ಮುಂದೆ ತಲೆಬಾಗಿ ನಿಂತರೇನು ಫಲ? ಸಂವಿಧಾನದ ಆಶಯಗಳಿಗೆ ಬೆಲೆಕೊಡದ ಆಡಳಿತಾರೂಢ ಬಿಜೆಪಿಯ ವಿರುದ್ದ ರಾಹುಲ್ ಗಾಂಧಿಯವರು ಕಿಡಿಕಾರಿದ್ದು, ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.