ಕುಮಾರಸ್ವಾಮಿಯವರೇ ಗುತ್ತಿಗೆದಾರ ಚೆಲುವರಾಜ್‌ಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಅರೆಸ್ಟ್ ಆಗಿರುವ ಬಿಜೆಪಿ ಶಾಸಕ ಮುನಿರತ್ನನವರ ಬಗ್ಗೆಯೂ ತುಟಿ ಬಿಚ್ಚಿ ಮಾತಾಡಿ ಎಂದು ಕಾಂಗ್ರೆಸ್ ಸವಾಲನ್ನು ಹಾಕಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ.
ಒಕ್ಕಲಿಗ ಹೆಣ್ಣುಮಕ್ಕಳನ್ನು ಮಂಚಕ್ಕೆ ಕಳಿಸುವಂತೆ ಬೇಡಿಕೆ ಇಟ್ಟ ಮುನಿರತ್ನರ ಬಗ್ಗೆ ತುಟಿ ಬಿಚ್ಚಲು ಭಯಪಡುತ್ತಿರುವುದೇಕೆ?
ಕಾನೂನಿನ ವ್ಯಾಪ್ತಿಯಲ್ಲಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡಾಗಿದೆ. ಆದರೆ, ತಮ್ಮ ಸಮುದಾಯದ ಮಹಿಳೆಯರ ಘನತೆಯ ಪ್ರಶ್ನೆ ಬಂದಿರುವಾಗ ಕುಮಾರಸ್ವಾಮಿ ಪಲಾಯನವಾದಿಯಾಗಿರುವುದೇಕೆ ?
ಬೇರೆಲ್ಲಾ ವಿಷಯಗಳಿಗೆ ಮೂಗು ತೂರಿಸುವ ಬ್ರದರ್ ಸ್ವಾಮಿಗಳು ತಮ್ಮ ಸಮುದಾಯದ ಮಹಿಳೆಯರ ವಿಷಯಕ್ಕೆ ಕಿವುಡಾಗಿರುವುದೇಕೆ? ಮಹಿಳೆಯರಿಗೆ “ದಾರಿ ತಪ್ಪಿದವರು” ಎಂದಿದ್ದ ಕುಮಾರಸ್ವಾಮಿಯವರು ಮುನಿರತ್ನರ ದಾರಿ ಸರಿ ಇದೆ ಎನ್ನುವರೇ ಎಂದು ಪ್ರಶ್ನಿಸಿದೆ.