ವಿಜಯಪುರ: ರಾಜ್ಯದ ಜನತೆಗೆ ನೀಡಿದ 5 ಗ್ಯಾರಂಟಿಗಳಿಂದ ಸಚಿವರಿಗೆ ಯಾವುದರಲ್ಲಿ ಎಲ್ಲಿ ಹಣ ಸಿಗುತ್ತದೆ ಮತ್ತು ಯಾವುದರಲ್ಲಿ ಕಬಳಿಸಿ  ತಿನ್ನಬೇಕು ಎನ್ನುವುದು ತಿಳಿಯದೆ ಗೊಂದಲದಲ್ಲಿದ್ದಾರೆ . ಗ್ಯಾರಂಟಿ ನೀಡಿದ ಸರ್ಕಾರದ್ದೇ ಗ್ಯಾರಂಟಿ ಇಲ್ಲವೆಂದು ಶಾಸಕ ಬಸವನಗೌಡ ಯತ್ನಾಳ್‌ ಕಾಂಗ್ರೆಸ್‌ ಪಕ್ಷದ ಕುರಿತು ವ್ಯಂಗ್ಯವಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಅಚಿವ ತಿಮ್ಮಾಪುರ ವರ್ಗಾವಣೆ ಭ್ರಷ್ಟಾಚಾರದ ವಿಚಾರವಾಗಿ , ಕಾಂಗ್ರೆಸ್‌ ಗೌರ್ನಮೆಂಟ್‌ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಚಾರದಲ್ಲಿ ತೊಡಗಿದೆ. ಪಂಚ ಗ್ಯಾರಂಟಿಗಳನ್ನು ನೀಡಿದ ಸರ್ಕಾರ ಯಾವ ಯೋಜನೆಯಲ್ಲಿ ಎಷು ಹಣವನ್ನು ಲೂಟಿ ಹೊಡೆಯಬೇಕೆಂಬ ಗೊಂದಲದಲ್ಲಿದ್ದಾರೆ.ಇವರಿಗೆ ಅಬಕಾರಿ ಇಲಾಖೆಯನ್ನು ಬಿಟ್ಟರೆ ಬೇರೆ ಯಾವುದು ಇಲ್ಲ. ಅವಕಾರಿ ಇಲಾಖೆಯ ವರ್ಗಾವಣೆಯಲ್ಲಿ ದೊಡ್ಡ ಉದ್ಯೋಗವನ್ನೇ ಸೃಷ್ಟಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟಿಗಳನ್ನು ನೀಡಿದ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ ಎಂದು ಟೀಕಿಸಿರುವ ಇವರು ಸಿಎಂ ಸಿದ್ದರಾಮಯ್ಯನವರು ಎಷ್ಟು ದಿನ ಸಿಎಂ ಆಗಿರ್ತಾರೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಕಾಂಗ್ರೆಸ್ಸಿಗರೆಲ್ಲರೂ ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ.ಕೆಲವು ಶಾಸಕರು ಸ್ವಪಕ್ಷದವರ ವಿರುದ್ದವೇ ಅಸಮಾಧಾನ ಹೊರಹಾಕ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಡಳಿತ ನಡೆಸುವುದರಲ್ಲಿ ವಿಫಲವಾಗಿದೆ.ನಮ್ಮ ಪಕ್ಷದಲ್ಲಿ ಶೇ40ರಷ್ಟು ಭ್ರಷ್ಟಚಾರವಿದೆ ಎಂದು ಹೇಳುವವರ ಪಕ್ಷದಲ್ಲಿ ಶೇ90ರಷ್ಟಿದೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *