ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ಪತ್ನಿ 14 ನಿವೇಶನಗಳನ್ನು ವಾಪಸ್ ನೀಡಲು ನಿರ್ಧಾರ ಮಾಡಿ ಒಳ್ಳೆಯ ಕೆಲಸವನ್ನ ಮಾಡಿದ್ದಾರೆ ಎಂದು ಗೃಹ ಸಚಿವರಾದ ಡಾ.ಜಿ,ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನ್ನ ಪತಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಸೈಟುಗಳನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ.ಇದು ಒಳ್ಳೇಯ ನಿರ್ಧಾರ. ಸೈಟುಗಳನ್ನು ಸ್ವೀಕರಿಸಿದ ಮೇಲೆ ಕಾನೂನಿನ ಪ್ರಕಾರ ಏನೇನು ನಡೆಯುತ್ತದೆಂದು ಕಾದುನೋಡಬೇಕಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಪತ್ನಿ ಇದುವರೆಗೂ ರಾಜಕೀಯ ವ್ಯವಹಾರಕ್ಕೆ ತಲೆಹಾಕಿದವರಲ್ಲ. ಮುಡಾ ಹಗರಣದ ವಿಚಾರವಾಗಿ ಅವರನ್ನು ಬೇಕಂತಲೇ ಎಳೆದುಕೊಳ್ಳಲಾಗಿದೆ. ಎಲ್ಲದಕ್ಕಿಂತ ಮರ್ಯಾದೆ ಮುಖ್ಯ ಎಂಬ ಭಾವನೆ ಹೊಂದಿರುವವರು ಅವರು. ಆದ್ದರಿಂದ ಮುಡಾ ಸೈಟುಗಳನ್ನು ವಾಪಸ್ ನೀಡುತ್ತಿದ್ದಾರೆ ಆದರೆ ಅದರಲ್ಲೂ ಬಿಜೆಪಿಯವರು ಕೊಂಕು ತೆಗೆಯುತ್ತಿದ್ದಾರೆ. ವಾಪಸ್ ಕೊಟ್ರೂ ಮಾತಾಡ್ತಾರೆ, ವಾಪಸ್ ಕೊಡದಿದ್ದರೂ ಮಾತಾಡ್ತಾರೆ. ರಾಜಕೀಯ ದುರುದ್ದೇಶದಿಂದ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ ಈ ರೀತಿ ಮಾಡುವುದು ಸರಿಯಲ್ಲವೆಂದು ತಿಳಿಸಿದ್ದಾರೆ.