ಬೆಂಗಳೂರು:ಸಿಎಂ ಸಿದ್ದರಾಮಯ್ಯನವರ ವಿರುದ್ದ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ ಕೂಡ ಮೊಂಡುತನ ಬಿಡದ ಸಿಎಂ ಸಿದ್ದರಾಮಯ್ಯ ನಾನು ರಾಜೀನಾಮೆ ನೀಡುವುದಿಲ್ಲವೆಂದು ಮತ್ತೆ ಮತ್ತೆ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮುಡಾ ಹಗರಣದ ಪ್ರಕರಣದಲ್ಲಿ A1 ಸಿಎಂ ಸಿದ್ದರಾಮಯ್ಯ, A2 ಆಗಿರುವ ಸಿದ್ದರಾಮಯ್ಯನವರ ಪತ್ನಿ ಬಿ.ಎಂ.ಪಾರ್ವತಿ, A3 ಆದ ಆರೋಪಿಯು ಸಿದ್ದರಾಮಯ್ಯನವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು A4 ಆರೋಪಿಯು ಜಮೀನು ಮಾರಾಟ ಮಾಡಿದ ದೇವರಾಜು ಈ 4 ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ತಮ್ಮ ಮೇಲೆ ಎಫ್‌ಐಆರ್ ದಾಖಲಾಗಿದ್ದರೂ ಕೂಡಾ ರಾಜೀನಾಮೆ ನೀಡಲು ಯಾಕೆ ವಿಳಂಬ ಮಾಡುತ್ತಿದ್ದೀರಾ? “ಬಂಧನಕ್ಕೆ ಒಳಗಾದರೂ ಇದೇ ಉದ್ದಟತನ ತೋರುತ್ತೀರಾ? ಎಂದು ಸಿಎಂ ನಡಾವಳಿಯನ್ನು ಪ್ರಶ್ನಿಸಿದೆ.