ಟಿವಿ ಮೊಬೈಲ್ ಎಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲವೇಳಿ.ಚಿಕ್ಕ ಮಕ್ಕಳಿಗೂ ಅಚ್ಚುಮೆಚ್ಚಾಗಿರುವ ಟಿವಿ, ಕಂಪ್ಯೂಟರ್, ಮತ್ತು ಪೋನ್ ಹೆಚ್ಚು ಬಳಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬಂತಾಗಿದೆ ಈಗಿನ ಆಧುನಿಕ ಜೀವನ ಶೈಲಿ.
ಚಿಕ್ಕವರಿಂದ ದೊಡ್ಡವರವರೆಗೂ ಪೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಇಂಟರ್‌ನೆಟ್ ಇದ್ದರೆ ಸಾಕು ಇಡೀ ಪ್ರಪಂಚದಲ್ಲಿವುದನ್ನೆಲ್ಲಾ ನೋಡಿಕೊಂಡು ಬರಬಹುದು ಎಂದು ಯಾರು ಹೇಳಿರುವುದು ನೆನಪಿಗೆ ಬಂತು.
ಅಯ್ಯೋ ಸ್ಕ್ರೀನ್‌ಟಚ್ ಫೋನ್ ಇದ್ದರೆ ಸಾಕು ಊಟ, ತಿಂಡಿ ಏನು ಬೇಡ ಎನ್ನುವಷ್ಟರ ಮಟ್ಟಿಗೆ, ಯುವಕರ, ಮಕ್ಕಳು, ಮತ್ತು ಎಲ್ಲಾ ವಯೋಮಾನದವರು ಮೊಬೈಲ್‌ಗೆ ದಾಸರಾಗಿರುತ್ತಾರೆ.
ಕೊರೊನಾ ಬಂದ ನಂತರ ಶಾಲೆಗಳಲ್ಲಿ ಹೋಂ ವರ್ಕ್‌ಗಳನ್ನು ಪಿಡಿಎಫ್ ಮುಖಾಂತರ ಗ್ರೂಪ್‌ಗಳಿಗೆ ಹಾಕಿಬಿಡುತ್ತಾರೆ. ಈ ಮಕ್ಕಳೊ ನಾನು ಹೋಂ ವರ್ಕ್ ಮಾಡಬೇಕೆಂದು ಮೊಬೈಲನ್ನು ತೆಗೆದುಕೊಂಡು ಬೇಗ ಬೇಗ ಬರೆದು ಮುಗಿಸಿ, ತಮಗೆ ಬೇಕಾದ ಚಿತ್ರಗಳನ್ನು, ರೀಲ್ಸ್‌ಗಳನ್ನು ನೋಡುತ್ತಾ ಕಾಲಃರಣ ಮಾಡುತ್ತಿರುತ್ತಾರೆ. ಹೇ, ಆಯ್ತಾ ಬರೆದಿದ್ದು ಎಂದರೆ ಇಲ್ಲ. ಇನ್ನೂ ಬರೆಯುತ್ತಿದ್ದೇನೆ ಎಂದು ಸುಳ್ಳು ಹೇಳುತ್ತದೆ. ಈ ಮಗು ಒಂದು ಮೊಬೈಲ್ ಕಾರಣಕ್ಕೆ ತನ್ನ ಪೋಷಕರಿಗೆ ಸುಳ್ಳು ಹೇಳುವ ಮಟ್ಟಕ್ಕೆ ತಲುಪಿದ್ದಾರೆ ಎಂದರೆ ಯಾವ ಮಟ್ಟಕ್ಕೆ ಈ ಮೊಬೈಲ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದರೆ ಲೆಕ್ಕಾಹಾಕಿ.
ಅತಿಯಾದ ಸ್ಕ್ರೀನ್‌ಟಚ್ ಪೋನ್ ಬಳಕೆಯಿಂದಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದೆ. ಮನರಂಜನೆಗೆಂದು ನೋಡುವ ರೂಡಿ ಹೋಗಿ ಗೀಳಾಗಿಬಿಟ್ಟಿರುತ್ತದೆ. ಈ ಎಲ್ಲಾ ಬೆಳವಣಿಗೆಯುಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ಇಲಾಖೆಯು ಎಚ್ಚರಿಕೆಯನ್ನು ನೀಡುತ್ತಿರುತ್ತದೆ.
ಸ್ಕ್ರೀನ್‌ಟಚ್ ಪೋನ್ ಬಳಕೆಯಿಂದ ಅದು ಹೊರಸೂಸುವ ಬೆಳಕು ಕಣ್ಣುಗಳಿಗೆ ಅಪಾಯಕಾರಿಯಾಗಿದ್ದು ಇದರಿಂದ ಕಣ್ಣೀನ ದೃಷ್ಟಿಯೂ ಕಡಿಮೆಯಾಗಿ ಕ್ರಮೇಣ ಕುರುಡುತನ ಬರಬಹುದು ಎಂದು ಅಂದಾಜಿಸಲಾಗಿದೆ.
ಹೆಚ್ಚು ಮೊಬೈಲ್ ಬಳಕೆಯಿಂದ ನಿದ್ದೆಯ ಮೇಲೆ ಪರಿಣಾಮ ಬೀರಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆಯಾಗುತ್ತದೆ.
ನಿದ್ದೆಯ ಅಭಾವದಿಂದ ದೈನಂದಿನ ಜೀವನ ಶೈಲಿಯ ದಿನಚರಿಯ ಮೇಲೆ ಹೆಚ್ಚು ಪರಿಣಾಮ ಬೀರುವ ಕಾರಣ ದಿನವೆಲ್ಲಾ ಅಲಸ್ಯದಿಂದ ಕೂಡಿರುತ್ತದೆ.
ಸ್ಕ್ರೀನ್‌ಟಚ್ ಪೋನ್ ಬಳಕೆಯಿಂದ ಮಕ್ಕಳು ದೈಹಿಕ ಚಟುವಟಿಕೆಯಿಂದ ಹಿಂದುಳಿಯುತ್ತಾರೆ.
ಮಕ್ಕಳನ್ನು ಮೊಬೈಲ್‌ನ ಗೀಳಿನಿಂದ ಹೊರತರಲು ಕೆಲವು ಟಿಪ್‌ಗಳು.
ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಪರಿಸರದ ಪರಿಚಯವನ್ನು ಮಾಡಿಸಿ, ಮನೆಯಾಚೆ ಮಕ್ಕಳನ್ನು ಕರೆತಂದು ಆಟಗಳನ್ನು ಆಡಿಸಿ ಅವರ ಗಮನವನ್ನು ಬೇರೆಡೆಗೆ ತಿರುಗಿಸಬಹುದು.
ಮಕ್ಕಳೊಂದಿಗೆ ಸಂವಾದ ನಡೆಸಿ ವಿಷಯಗಳ ಕುರಿತು ಚರ್ಚೆಯನ್ನು ಮಾಡಿ ಅರಿವು ಮೂಡಿಸಿ.
ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೆಪಿಸಿ.
ಅವಶ್ಯಕತೆಯಿದ್ದರೆ ಮಾತ್ರ ಮೊಬೈಲ್ ಪೋನ್ ಅವರಿಗೆ ನೀಡಿ.
ಸ್ಕ್ರೀನ್‌ಟಚ್ ಪೋನ್ ಬಳಕೆಯ ಅನಾನುಕೂಲತೆಯ ಬಗ್ಗೆ ಮಕ್ಕಳೊಂದಿಗೆ ಕೂಲಂಕುಶವಾಗಿ ಮಾತನಾಡಿ.