ಹಾಸನ: ನಿಖಿಲ್ ಕುಮಾರಸ್ವಾಮಿಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರದ ಬಗ್ಗೆ ತೀರ್ಮಾನ ಮಾಡಿಲ್ಲ.ಪ್ರಚಾರದ ಆಹ್ವಾನವೂ ನನಗೆ ಬಂದಿಲ್ಲ ಎಂದು ಮಾಜಿಸಚಿವ , ಕೋರ್ ಕಮಿಟಿಯ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನವನ್ನು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಾನು ತುಂಬಾ ಬ್ಯುಸಿಯಾಗಿದ್ದೇನೆ, ಆದ್ದರಿಂದ ನಾನು ಯಾವುದೇ ಚುನಾವಣೆಗೆ ಪ್ರಚಾರಗಳಲ್ಲಿ ಭಾಗವಹಿಸಲಿಲ್ಲ. ಚನ್ನಪಟ್ಟಣದ ಚುನಾವಣೆಯ ಕುರಿತು ಹೆಚ್ಚಿನ ಮಾಹಿತಿ ನನಗಿಲ್ಲ ಎಂದು ಹೇಳಿದ್ದಾರೆ.
ನಾನು ನನ್ನ ಕ್ಷೇತ್ರದಲ್ಲಿನ ಕೆಲಸಗಳ ಒತ್ತಡದಲ್ಲಿದ್ದೇನೆ ಪ್ರಚಾರಕ್ಕೆ ಬುಲಾವ್ ಬಂದರೆ ನೋಡೋಣ. ಚನ್ನಪಟ್ಟಣದ ಚುನಾವಣೆಯ ಬಗ್ಗೆ ಮಾಹಿತಿಯಿಲ್ಲ, ಆ ವಿಷಯದ ಕುರಿತು ಹೇಳಿಕೆ ನೀಡುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ.