ಹರಿಪ್ರಕಾಶ್ ಕೋಣೆಮನೆ ಎಂಬ ವಿಸ್ತಾರ ಮಾಧ್ಯಮದ ಅಂಕಣಕಾರರು ಇಂದು ಮಹಿಷ ದಸರದ ರೂವಾರಿಗಳನ್ನು “ಸಮಾಜ ಭಂಜಕರನ್ನು ಗುರುತಿಸಿ, ದೂರವಿಡೋಣ” ಎಂದು ಉಚಿತ ಸಲಹೆಯೊಂದನ್ನು ನೀಡಿದ್ದಾರೆ. ಅದೂ ಅಲ್ಲದೆ, ನಮಗೇ ಈ ತನಕ ತಿಳಿಯದೇ ಇದ್ದ ಪುರಾಣ ಮತ್ತು ಇತಿಹಾಸದ ಅನೇಕ ಮೂರ್ತ ಮತ್ತು ಅಮೂರ್ತ ಮೌಲ್ಯಗಳು ಮತ್ತು ಪಾತ್ರಗಳ ಪರಿಚಯ ಮಾಡಿಸುವ ಹಲವು ಸಲಹೆಗಳನ್ನು ನೀಡಿ ಕೃತಾರ್ಥರಾಗಿದ್ದಾರೆ. ಯಥಾಸ್ಥಿತಿಗಳನ್ನು ಕಾಪಾಡುವುದೇ ಸಮಾಜದ ಸ್ವಾಸ್ಥ್ಯ ಇದ್ದಂತೆಯೇ ಇರಿ ಎಂಬ ಪ್ರತಾಪ ಸಿಂಹನ ನೆರೆಟಿವ್ ಗಳನ್ನು ಸುಭದ್ರಗೊಳಿಸುವ ಸಂಕಲ್ಪ ಮಾಡಿದ್ದಾರೆ.

ಹರಿಪ್ರಕಾಶ್‌ ಕೋಣೆಮನೆ

ಸನ್ಮಾನ್ಯ ಸಿಮ್ಮ ಅವರಿಗೆ ನೀಡಿದ್ದ ನಾನು ನೀಡಿದ್ದ ಕೆಲವು ಸಲಹೆಗಳು ಮತ್ತು ಸವಾಲುಗಳನ್ನೇ ನೀಡುತ್ತಿದ್ದೇನೆ. ದಯಮಾಡಿ ನಿಮಗೆ ಕನಿಷ್ಟ ಮನುಷ್ಯತ್ವ ಮತ್ತು ಸಮತೆಯ ಆಶಯ ಇದ್ದರೆ, ಬಾಬಾಸಾಹೇಬರ “Philosophy of Hinduism”, “Revolution and counter revolution in ancient India”, “Annihilation of caste” ಮತ್ತು ಮಹಾತ್ಮ ಜ್ಯೋತಿ ಬಾಫೂಲೆ ಅವರ “The slavery” ಕೃತಿಗಳನ್ನು ಓದಿ ಪ್ರತಿಕ್ರಿಯಿಸಬೇಕು ಎಂದು ಬಯಸುವೆ. ಆನಂತರ ಚರ್ಚೆ ಮಾಡುವ ಮನಸಿದ್ದರೆ ಖಂಡಿತಾ ಮಾಡೋಣ.

ಮಹಿಷ ದಸರಾದ ರೂವಾರಿಗಳು ನಾವೆ! ಆದರೆ ನಾವು ನಿಮ್ಮಂತೆ ನಾವು ಅನ್ಯಾಯಕಾರರಲ್ಲ. ಯಾಕೆ ಅಂತೀರಾ? ಮುಂದೆ ಓದಿ ನೋಡಿ…

ನಿಜ ನೀವು ಹೇಳುವಂತೆ, ನಮ್ಮ ಸಮುದಾಯದ ಸರ್ವರೂ ಇದನ್ನು ಬೆಂಬಲಿಸುವುದಿಲ್ಲ. ಯಾಕೆಂದರೆ ಅವರಿಗೆ ಇತಿಹಾಸದ ಪ್ರಜ್ಞೆ ಇಲ್ಲ. “ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ ಎನ್ನುತ್ತಾ, ರಕ್ಷಣೆಯ ಸರ್ವ ಪಾತ್ರಗಳೂ ವೈದಿಕರು. ಆ ವೈದಿಕರೆಲ್ಲಾ ದೇವರುಗಳೆಂದೂ, ಅದೇರೀತಿ ಆದಿಜನರು ರಕ್ಕಸರು, ದುಷ್ಟರು ಎಂದೂ ಕಟ್ಟುಕತೆಗಳ ಮೂಲಕವೇ ಮನದಟ್ಟು ಮಾಡಿಸಿ, ಇತಿಹಾಸವನ್ನು ಪುರಾಣದೊಳಗೆ ಮಿಳಿತಗೊಳಿಸಿ, ಭಾರತದ ಇತಿಹಾಸವನ್ನು ಬರೆದು, ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವಂತೆ ಕಟ್ಟುಕತೆಗಳಾಗಿಸಲಾಗಿದೆ. ನಿಜವಾದ ಭಾರತದ ಇತಿಹಾಸವು ವೈದಿಕರು ಮತ್ತು ಬೌದ್ದರ ನಡುವೆ ನಡೆದ ಮಹಾಸಂಘರ್ಷದ ಕತೆಯಾಗಿದೆ. ಅಕ್ಷರದ ವಾರಸುದಾರರಾಗಿದ್ದ ವೈದಿಕರು ಇತಿಹಾಸಗಳನ್ನು ತಿರುಚಿ ಕಟ್ಟುಕತೆಗಳಾಗಿಸಿ, ಇತಿಹಾಸಕ್ಕೆ ದ್ರೋಹ ಎಸಗಿದ್ದಾರೆ. ಇದು ಇತಿಹಾಸ ಅಧ್ಯಯನ ದ ಕ್ರಮವಲ್ಲ” ಇದಿಷ್ಟೂ ಮಾತು ನಾನು ಮೇಲೆ ಉಲ್ಲೇಖಿಸಿದ ಬಾಬಾಸಾಹೇಬರ “ರೆವಲ್ಯೂಷನ್….” ಕೃತಿಯಲ್ಲಿದೆ. ಓದಿ.

ಡಾ. ಚಮರಂ ಅವರ ಶೂದ್ರ ಪ್ರತಾಪ ಸಿಂಹನ ವೈದಿಕ ವಕಾಲತ್ತು! ಲೇಖನವನ್ನೂ ಓದಿ

ಏನಿದರ ಅರ್ಥ?

ಇದು ನಮ್ಮ ಸಮುದಾಯಕ್ಕೂ ಇನ್ನೂ ತಿಳಿದಿಲ್ಲ. ಹಾಗಂದಾಕ್ಷಣಕ್ಕೆ ನಮಗೆ ನಮ್ಮದೇ ಸಮುದಾಯದ ಬೆಂಬಲವಿಲ್ಲ ಎಂದರ್ಥವೇ?
ಬಾಬಾಸಾಹೇಬರನ್ನು ಈಗೀಗಷ್ಟೇ ಪ್ರತಿಮೆಗಳಲ್ಲಿ ನಮ್ಮ ಸಮುದಾಯ ಆರಾಧಿಸತೊಡಗಿದೆ. ನಮ್ಮಂತಹ ಬೆರಳೆಣಿಕೆಯ ಮಂದಿ ಮಾತ್ರವೇ ಅವರನ್ನು ಪುಸ್ತಕಗಳಲ್ಲಿ ಹುಡುಕುತ್ತಿದ್ದೇವೆ. ಅದನ್ನು ಅಖಂಡ ಭಾರತೀಯ ಸಮುದಾಯಕ್ಕೆ ಹೇಳಲು ಪ್ರಯತ್ನಿಸುತ್ತಿದ್ದೇವೆ. ಇದೇ ಸಮಾಜ ಭಂಜಕ ನೆರೆಟೀವ್ ಎನ್ನುವುದಾದರೆ, ಇದೇ ಹರಿಪ್ರಕಾಶ್‌ ಕೋಣೆಮನೆ ಹೇಳುವ ಜಗದ್ಗುರು ಶಂಕರಾಚಾರ್ಯರು ಮಾಡಿದ್ದೇನು? ಭಾರತದ ಎಲ್ಲಾ ಬೌದ್ದಮಂದಿರಗಳನ್ನು ಒಡೆದು, ಅಥವಾ ವಶಪಡಿಸಿಕೊಂಡು ವೈದಿಕ ಕೇಂದ್ರಗಳಾಗಿಸಿದ ಇತಿಹಾಸವನ್ನೂ ನಾವು ಮೂಲಭಾರತೀಯ ಬೌದ್ದರಾಗಿ ಏನು ಮಾಡಬೇಕು? ಶಂಕರಾಚಾರ್ಯರದು ಹೊಸ ನೆರೆಟಿವ್ ಆಗಿರಲಿಲ್ಲವೇ? ಅದು ಸಮಾಜ ಭಂಜಕ ಆಗಿರಲಿಲ್ಲವೇ? ಅಸ್ಪೃಶ್ಯರಾಗಿ ಸಾವಿರಾರು ವರ್ಷ ಹೀನಾಯ ಬದುಕು ಬದುಕಿದಾಗ ಅದರ ವಿರುದ್ಧ ಸಮರ ಸಾರಲು ಏಕೆ ಮೇಲಿನಿಂದ ಯಾರೂ ಬರಲಿಲ್ಲ? ಏಕೆ ಆಗ ದುಷ್ಟ ಶಿಕ್ಷಣೆಯ ದೇವಿ ದೇವತೆಯರು ಅವತರಿಸಲಿಲ್ಲ? ಏಕೆ ಅಸ್ಪೃಶ್ಯರ ವಿಮೋಚನೆ ಮಾಡಲಿಲ್ಲ? ಅಥವಾ ಈ ಅಸ್ಪೃಶ್ಯತೆ ತಪ್ಪು ಎಂದು ಏಕೆ ಉಳಿದ ವೈದಿಕರಿಗೆ ಅನಿಸಲೇ ಇಲ್ಲ!? ಬಸವಣ್ಣ ಬರಬೇಕಾಯ್ತು! ಬಸವಣ್ಣನ ನೆರೆಟಿವ್ ಆದರೂ ಸಮಾಜಕ್ಕೆ ಒಪ್ಪಿತವಾಯ್ತೋ!? ಅಸ್ಪೃಶ್ಯತೆ ಯ ನೋವುಂಡ
ಅಂಬೇಡ್ಕರ್ ಅವರು ಬರಬೇಕಾಯ್ತು? ಅವರ ನೆರೆಟಿವ್ ಇಷ್ಟವಾಗಿದೆಯೋ ಈಗಲಾದರು?

ನಮ್ಮ ವಾಟ್ಸಾಪ್‌ ಚಾನಲ್‌ ಸೇರಲು ಇಲ್ಲಿ ಕ್ಲಿಕ್‌ ಮಾಡಿ

ಜಾತಿಯತೆ ಇಲ್ಲವಂತೆ! ಶಿಥಿಲವಾಗುತ್ತಿದೆಯಂತೆ!

ಎಲ್ಲಿಯ ಕನಸು ಇದು? ಮರ್ಯಾದೆ ಹತ್ಯೆಗಳು ಈ ಆಧುನಿಕ ಯುಗದಲ್ಲಿ ಏಕೆ ನಡೆಯುತ್ತಿವೆ? ಹೋಗಲಿ, ಇಷ್ಟು ಶಿಕ್ಷಿತರಾದಿರಲ್ಲ ಈಗಲಾದರೂ ಅಸ್ಪೃಶ್ಯತೆ ತಪ್ಪು, ಅಸಮಾನತೆ ತಪ್ಪು, ಜಾತಿಯತೆ ತಪ್ಪು, ನಿಜಕ್ಕೂ ದುಷ್ಟತೆ ಎಂದರೆ, ಸಮಾಜ ಭಂಜಕ ಕೃತ್ಯವೆಂದರೆ, ಸಂವಿಧಾನವಿರೋಧಿ ನಡೆಯೆಂದರೆ ಇದೇ ಎಂಬ ಕಾಮನ್ ಸೆನ್ಸ್ ಆದರೂ ಇದೇಯೇನ್ರಿ ನಿಮಗೆ ಕೊಣೆಮನೆ?

ನಿಜ. ಇದೇ ಮೂಢ ಅಸ್ಪೃಶ್ಯರೆಲ್ಲರ ಮನೆಗಳಲ್ಲಿ, ಶೂದ್ರರೆಲ್ಲಾ ಮನೆಗಳಲ್ಲಿ, ಲಿಂಗಾಯತರೆಲ್ಲಾ ಮನೆಗಳಲ್ಲಿ ನೀವು ಹೇಳಿದ ದುಷ್ಟ ಶಿಕ್ಷಣೆಯ ಸಂಕೇತಗಳಾದ ವೈದಿಕರ ದೇವರುಗಳ ಪಟಗಳು ಕಾಲಾಂತರದಿಂದಲೂ ನಿಮ್ಮದೇ ನೆರೆಟಿವ್ ನಂತೆ ಪೂಜಿಸಲ್ಪಡುತ್ತಿವೆ. ಈಗಲಾದರೂ ವೈದಿಕರ ಒಬ್ಬೇ ಒಬ್ಬನೆಯಲ್ಲಿ ಬಸವಣ್ಣ, ಫೂಲೆ, ಅಂಬೇಡ್ಕರ್, ನಾರಾಯಣಗುರು ಪಟಗಳುಂಟೋ? ಹೋಗಲಿ ಮಹದೇಶ್ವರ, ಮಾರಮ್ಮ, ಭೀರಪ್ಪನ ಪಟಗಳಿವೆಯೋ!? ಅಸಂಭವ! ಏಕೆಂದರೆ ಅವರ ಪ್ರಕಾರ ಈ ಎಲ್ಲರೂ ಸಮಾಜಭಂಜಕರೇ ಆಗಿದ್ದಾರೆ. ಮತ್ತು ಇವರೇ ಸಮಾಜದ ನೆರೆಟಿವ್ ಗಳನ್ನು ಬದಲಿಸಿದ ದುಷ್ಟರಾಗಿದ್ದಾರೆ! ಮೇಲ್ಪದರ ನೋಡಿ ಸುಳ್ಳುಗಳನ್ನು ಸೊಗಸಾಗಿ ಕಟ್ಟುವ ನಿಮ್ಮಂತವರಿಗೆ ಇತಿಹಾಸದ ಆಳ ತಿಳಿದಿಲ್ಲ. ತಿಳಿಯುವ ಪ್ರಯತ್ನವೂ ಬೇಕಿಲ್ಲ. ಒಟ್ನಲ್ಲಿ ನಿಮ್ಮ ಶ್ರೇಷ್ಟತೆಯ ವ್ಯಸನಕ್ಕೆ ಧಕ್ಕೆ ಬರಬಾರದು ಅಷ್ಟೆ. “ಜಯಹೇ ಮಹಿಷಾಸುರ ಮರ್ದಿನಿ” ಹಾಡು ನಿಮಗೆ ಇತಿಹಾಸ!

ಹೆಣ್ಣೆಂದರೆ ಎರಡು ಕನಸಿನ ಕಲ್ಪನಾ ರೀತಿ, ಬೆಳಗ್ಗೆ ಸೂರ್ಯೋದಕ್ಕೆ ಮುನ್ನ ಎದ್ದು ಮನೆಕೆಲಸ ಮುಗಿಸಿ, ಸ್ನಾನ ಮಾಡಿ, ಪೂಜೆ ಮಾಡಿ, ಮಡಿಯಾಗಿ, ಕಾಫಿ ಮಾಡಿ ಇನ್ನೂ ಮಲಗಿರುವ ಗಂಡನ ಪಾದಗಳನ್ನು ಪೂಜಿಸಿ, ಅಲ್ಲೇ ಬೆಡ್ ಕಾಫಿ ತಂದು ಕೊಡುತ್ತಾಳಲ್ಲ ಅದು ಸಂಸ್ಕೃತಿ. ಅವಳು ಸಮಾನತೆ ಬಯಸಿದರೆ ಹೊಸ ನೆರೆಟಿವ್ ಅಲ್ವೇನ್ರಿ?

ಕನಿಷ್ಟ “ದ ಗ್ರೇಟ್ ಇಂಡಿಯನ್ ಕಿಚನ್” ಅಂತ ಒಂದು ಮಲಯಾಳಂ ಸಿನಿಮಾ ಬಂದು ಮೂರು ವರ್ಷ ಕಳೆದಿವೆ. ನಿಮ್ಮ ಹೆಂಡತಿ, ತಾಯಿ, ತಂಗಿಯರು, ಹೆಣ್ಮಕ್ಕಳು ಎಲ್ಲರಿಗೂ ಈ ಸಿನಿಮಾ ತೋರಿಸಿ. ನಂತರ ಇದಕ್ಕೆ ನಿಮ್ಮ ಹೆಣ್ಮಕ್ಕಳು ಏನಂತಾರೆ ಕೇಳಿ ನೋಡಿ. ಇದು ಹೊಸ ನೆರೆಟಿವ್, ನಮ್ಮ ಸಂಸ್ಕೃತಿಗೆ ವಿರುದ್ದ ಎನ್ನುವರೋ ಅಥವಾ ಇದೇ ನಿಜವಾದ ಮನುಷ್ಯತ್ವದ ನೆರೆಟಿವ್ ಅಂತಾರೋ ಹೇಳಿ. ನಂತರ ಮಹಿಷ, ಮಹಿಷ ಮರ್ದಿನಿ ಚಾಮುಂಡಿ ವಿಚಾರಗಳನ್ನು ಚರ್ಚೆ ಮಾಡೋಣ. ಏನಂತೀರಿ?

Leave a Reply

Your email address will not be published. Required fields are marked *