ಮೈಸೂರು: ಇಡೀ ದೇಶಕ್ಕೇ ಬುದ್ದಿ ಹೇಳುತ್ತಿರುವ ದೇವೇಗೌಡರು ತಮ್ಮ ಮಗನಿಗೆ ಯಾಕೆ ಬುದ್ದಿ ಹೇಳುವುದಿಲ್ಲ? ಎಂದು ಕೃಷಿ ಸಚಿವರಾದ ಚಲುವನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿಯವರು ಯಾವ ಅಭಿವೃದ್ಧಿಯ ಕಾರ್ಯಗಳನ್ನು ಮಾಡದೆ, ದಿನಕ್ಕೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.ಈ ವಿಚಾರದ ಕುರಿತು ದೇವೆಗೌಡರು ತಮ್ಮ ಮಗನಿಗೆ ಬುದ್ದೀ ಹೇಳದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.
ನಾನು ಕೃಷಿ ಮಂತ್ರಿಯಾಗಿ ತನ್ನ ಖಾತೆಯನ್ನು ಸದುಪಯೋಗಪಡಿಸಿಕೊಂಡು ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದು ನನ್ನ ಕೆಲಸವನ್ನು ನಾನು ನಿಷ್ಠೆಯಿಂದ ಮಾಡುತ್ತೀದ್ದೇನೆ ಆದರೆ ಕುಮಾರಸ್ವಾಮಿಯವರು ಕೇಂದ್ರ ಕೈಗಾರಿಕಾ ಮಂತ್ರಿಯಾಗಿ ಯಾವ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ? ಮೂರು ದಿನಗಳಿಗೊಮ್ಮೆ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಬೇರೆ ಏನು ಮಾಡಿಲ್ಲವೆಂದು ವ್ಯಂಗ್ಯವಾಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರು ಹಂದಿ, ನಾಯಿ, ನರಿ,ಎಂಬ ಪದಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಇವರ ಲೆಕ್ಕದಲ್ಲಿ ಇವರೊಬ್ಬರೇ ಮರ್ಯಾದಸ್ತರು ಎಂದುಕೊಂಡುಬಿಟ್ಟಿದ್ದಾರೆ. ಈ ರೀತಿಯ ಕೆಲಸಕ್ಕೆ ಬಾರದ ಹೇಳಿಕೆಗಳನ್ನು ನೀಡುವುದನ್ನು ಮೊದಲು ಬಿಡಬೇಕು ಎಂದಿದ್ದಾರೆ.