ಶಿಗ್ಗಾವಿ: ಮೂರು ಕ್ಷೇತ್ರಗಳ ಚುನಾವಣೆಯೂ ಮೂರೂ ಪಕ್ಷಗಳ ಮರ್ಯಾದೆ ಪ್ರಶ್ನೆಯಾಗಿದೆ. ಈ ಮೂವರು ನಡೆಸಿದಂತಹ ಕಸರತ್ತುಗಳನ್ನು ನೋಡಿದರೆ ಎಲ್ಲರಿಗೂ ಬೈಎಲೆಕ್ಷನ್‌ ಫಲಿತಾಂಶ ಮುಖ್ಯವಾದುದ್ದು, ಆದರೆ ಶಿಗ್ಗಾವಿ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೆ ಮುಖಭಂಗವಾಗಿರುವುದು ತಿಳಿದುಬಂದಿದೆ.

ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್‌ ಬೊಮ್ಮಾಯಿ ಸೋಲನ್ನು ಅನುಭವಿಸಿದ್ದು, ಕಾಂಗ್ರೆಸ್ಸಿನ ಅಭ್ಯರ್ಥಿ ಯಾಸಿರ್‌ ಪಟಾಣ್‌ ಮುನ್ನಡೆಯನ್ನು ಸಾಧಿಸಿದ್ದಾರೆ.

ಮೊದಲಿನಿಂದಲೂ ಮುನ್ನಡೆಯನ್ನು ಸಾಧಿಸಿದ ಭರತ್‌ ಯಾಸೀರ್‌ ಪಟಾನ್‌ ನೀಡಿದ ಟಫ್‌ ಪೈಟಿನಿಂದಾಗಿ ಕಾಂಗ್ರೆಸ್‌ ಗೆಲುವನ್ನು ಸಾಧಿಸಿದ್ದು ಅಧೀಕೃತವಾಗಿ ಅನೌನ್ಸ್‌ ಆಗಬೇಕಿದೆ. ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ಗೆ 93.234 ಮತಗಳಾದರೆ ಎನ್‌ಡಿಎ ಅಭ್ಯರ್ಥಿಯಾದ ಭರತ್‌ ಬೊಮ್ಮಾಯಿಗೆ 79756 ಮತಗಳು ಲಭ್ಯವಾಗಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *