ಬೆಂಗಳೂರು: ಇನ್ನೇನು ನಾಳೆ ಬೆಳಗ್ಗೆಯಿಂದಲೇ  ಉಪಚುನಾವಣೆ ನಡೆಯಲಿದ್ದು ಈ ಚುನಾವಣೆ ರಾಜ್ಯದ ಮೂರು ಕ್ಷೇತ್ರಗಳಾದ  ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತದೆ.ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೂ ಮತದಾನ ಮಾಡಲು ಕಾಲಾವಕಾಶವಿರುತ್ತದೆ ಎಲ್ಲರೂ ತಲ್ಲದೆ ಮತ ಚಲಾಯಿಸಿ.

ಈ 3 ಕ್ಷೇತ್ರಗಳ ಬೈ ಎಲೆಕ್ಷನ್‌ ಮೂರು ಪಕ್ಷಗಳ ನಾಯಕರುಗಳ ಪ್ರತಿಷ್ಠೆಯ ಚುನಾವಣೆಯಾಗಿದೆ. ಆದ್ದರಿಂದ ಮೂರು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಲು 3 ಪಕ್ಷಗಳು ಹರಸಾಹಸ ಮಾಡುತ್ತಿವೆ.ಈಗಾಗಲೇ ಎಲ್ಲಾಪಕ್ಷದ ನಾಯಕರೂ ತಮ್ಮ ಕಸರತ್ತುಗಳನ್ನು ತೋರಿಸಿ ಭರ್ಜರಿ ಪ್ರಚಾರವನ್ನು ಮಾಡಿದ್ದಾರೆ. ಇನ್ನೇನು ಮತದಾನ ಪ್ರಭುಗಳ ಕೈಯಲ್ಲಿದೆ ಮೂರು ಪಕ್ಷದ ನಾಯಕರ ಹಣೆಬರಹ.

3 ವಿಧಾನಸಬಾ ಕ್ಷೇತ್ರಗಳಲ್ಲಿ ಹಾಲಿ ಮಾಜಿ ಮೂಖ್ಯಮಂತ್ರಿಗಳು ಕಣಕ್ಕೆ ಇಳಿದಿದ್ದು, ಸ್ಪರ್ಧಿಗಳ ಮಧ್ಯೆ ಜಿದ್ದಾಜಿದ್ದಿ ನಡೆಯುತ್ತಿದೆ ನೋಡೋಣ ಚುನಾವಣೆ ಮುಗಿದ ನಂತರ ಯಾರನ್ನು ಜನರು ಗೆಲ್ಲಿಸುತ್ತಾರೆ.ಮತ್ತು ಯಾರನ್ನು ಸೋಲಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನೂ ಸಂಡೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಆಪ್ತ ತುಕಾರಾಂ ಪತ್ನಿ ಸ್ಪರ್ಧಿಸುತ್ತಿದ್ದಾರೆ.ಶಿಗ್ಗಾವಿಯಲ್ಲಿ ಜಮೀರ್‌ ಆಪ್ತ ಯಾಸೀರ್‌ ಖಾನ್‌ ಪಠಾಣ್‌ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನೂ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ ಸ್ಪರ್ಧಿಸಿದ್ದು, ಈ ಮೂವರ ಗೆಲುವು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್‌ ಅವರ ಪ್ರತಿಷ್ಠೆಯ ಚುನಾವಣೆಯಾಗಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *