ಬೆಂಗಳೂರು: ಕರ್ನಾಟಕ ಅಸೆಂಬ್ಲಿ ಬೈಎಲೆಕ್ಷನ್ನಿನಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದ್ದು ಇದು ರಾಹುಲ್‌ಗಾಂಧಿ ಮತ್ತು ಖರ್ಗೆಯವ ನಾಯಕತ್ವಕ್ಕೆ ಸಿಕ್ಕ ಜಯಎಂದು ರಣದೀಪ್‌ಸಿಂಗ್ ಸುರ್ಜೆವಾಲಾ ಹರ್ಷವನ್ನು ವ್ಯಕ್ತಪಡಿಸಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಅಸೆಂಬ್ಲಿ ಬೈಎಲೆಕ್ಷನ್ನಿನಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದೆ. ನಮ್ಮ ಅಭ್ಯರ್ಥಿಗಳು ಮಾಜಿ ಸಿಎಂ ಮಕ್ಕಳನ್ನು ಹೀನಾಯವಾಗಿ ಸೋಲಿಸಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ 26.929 ಮತಗಳಿಂದ ಗೆಲುವನನು ಸಾಧಿಸಿದರೆ, ಸಿಪಿ ಯೋಗೇಶ್ವರ್ ಜೆಡಿಎಸ್-ಬಿಜೆಪಿಯ ನಿಕಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿಯ ಬಿ.ಹನುಮಂತಪ್ಪನವರನ್ನು ಸೋಲಿಸಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿಯವರನ್ನು 13.446 ಮತಗಳಿಂದ ಯಾಸೀರ್ ಪಠಾಣ್ ಗೆಲುವನನು ಸಾಧಿಸಿದ್ದಾರೆ.
ಈ ಗೆಲುವು ಖರ್ಗೆ ರಾಹುಲ್‌ನಾಯಕತ್ವಕ್ಕೆ ಸಿಕ್ಕ ಜಯ. ಕಾಂಗ್ರೆಸ್ ಕಾರ್ಯಕರ್ತರ ಗೆಲುವು, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳಿಂದ ಮತ್ತು ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಗೆಲುವನ್ನು ಪಡೆದಿದ್ದು ಇದು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಆಡಳಿತವನ್ನು ಶ್ಲಾಘನೆ ಮಾಡಿದ್ದಾರೆ.