ಚಿತ್ರದುರ್ಗ: ರಾಜ್ಯದಲ್ಲಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.ಆದ್ದರಿಂದ ಸಚಿವ ಜಮೀರ್ ಅಹ್ಮದ್ರನ್ನು ಗಡಿಪಾರು ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಜಮೀನು, ಹಿಂದೂಗಳ ಆಸ್ತಿಗಳು, ಮಠ ಮಾನ್ಯಗಳ ಆಸ್ತಿಯನ್ನು ಕಸಿದುಕೊಳ್ಳುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಮೊಸಳೆ ಕಣ್ಣಿರನ್ನು ಹಾಕುತ್ತಿದ್ದಾರೆ.ಅದರ ಬದಲು ರೈತರಿಗೆ ಕೊಟ್ಟಿರುವ ವಕ್ಫ್ ನೋಟಿಸುಗಳನ್ನು ವಾಪಸ್ ಪಡೆದುಕೊಳ್ಳಲಿ, ಅವರಿಗೆ ದಮ್ಮು, ತಾಕತ್ ಇದ್ದರೆ ಗೆಜೆಟ್ ನೋಟಿಫಿಕೇಶನ್ ವಾಪಸ್ ತೆಗದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ವಕ್ಫ್ ಮೂಲಕ ರೈತರ ಜಮೀನುಗಳನ್ನು ಸಾರ್ವಜನಿಕ ಆಸ್ತಿಗಳನ್ನು ಜಮೀರ್ ಅಹ್ಮದ್ ಕೊಳ್ಳೆಹೊಡೆಯುತ್ತಿದ್ದಾರೆ. ಆದ್ರಿಂದ ಅವರನ್ನುಗಡಿಪಾರು ಮಾಡಿದ್ರೆ ಇಡೀ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.