ಬಿಗ್‌ಬಾಸ್ ಮನೆಯ್ಲಲಿ ಕಲಹ ಸೃಷ್ಟಿಸಿದ ಚೆಂಡಾಟ!
ಬಿಗ್‌ಬಾಸ್ ಮನೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ಲೆಕ್ಕಾಚಾರದ ಆಟ ಆಡುತ್ತಿದ್ದು, ಬುದ್ದಿವಂತಿಕೆಯಿಂದ ತಮ್ಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಮನೆಯಲ್ಲಿರುವರೆಲ್ಲರೂ ಬುದ್ದಿವಂತಿಕೆಯಿಂದ ತಮ್ಮ ಆಟವನ್ನು ಆಡುವುದರ ಮೂಲಕ ಗೆಳೆತನದಲ್ಲಿ ಬಿರುಕಿಗಳು ಮೂಡುತ್ತಿವೆ.ಮನೆಗೆ ಎಂಟ್ರಿಯಾದಾಗಿನಿಂದಲೂ ಗೌತಮಿ, ಮೋಕ್ಷಿತಾ, ಮತ್ತು ಉಗ್ರಂ ಮಂಜುರವರ ಸ್ನೇಹವೂ ಬೆಸೆದುಕೊಂಡಿತ್ತು. ಆದರೀಗ ಈ ಮೂವರ ಸ್ನೇಹದ ನಡುವೆ ಬಿರುಕಾಗಿದೆ. ಉಗ್ರಂ ಮಂಜು ಆಡಿರುವ ಆಟದಿಂದ ಗೌತಮಿ ಬೇಸರವಾಗಿದ್ದರೆ, ಮೋಕ್ಚಿತಾ ಪೈ, ಮಂಜಣ್ಣ 2 ದಿನದಿಂದ ಬದಲಾಗಿದ್ದಾನೆ. ಇಷ್ಟು ದಿನ ನೋಡಿದ ಮಂಜಣ್ಣ ಇವರಲ್ಲ.ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೌತಮಿ, ಮೋಕ್ಷಿತಾ, ಮತ್ತು ಉಗ್ರಂ ಮಂಜುರವರ ನಡುವೆ ಇದ್ದ ಸ್ನೇಹಕ್ಕೆ ಇದೀಗ ಕತ್ತರಿ ಬಿದ್ದಿದ್ದು, ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚೆಂಡಿನ ಆಟ ಶುರುವಾದಾಗಿನ ಮುಂಚೆ ಇದ್ದ ಸಾಮರಸ್ಯ ಆಟ ಮುಗಿದ ಮೇಲೆ ಇಲ್ಲದಾಗಿದೆ.
ಮೋಕ್ಷಿತಾ ಗಮನಿಸಿರುವಂತೆ ಮಂಜಣ್ಣ ತುಂಬಾ ಚೆಂಜ್ ಆಗಿದ್ದಾರೆ ಎರಡು ದಿನಗಳಿಂದ ಪೈನ್ಡ್ ಔಟ್ ಮಾಡಿದ್ದು, ಉಗ್ರಂ ಮಂಜುವಿನ ಮೇಲೆ ಸಂಶಯ ಬಂದಿರುವುದಂತೂ ನಿಜ ಅದು ಚೆಂಡಿನ ಆಟದ ಸಮಯದಲ್ಲಿ ಬೆಳಕಿಗೆ ಬಂದಿದೆ. ಉಗ್ರಂ ಮಂಜಣ್ಣ ಬದಲಾಗಿದ್ದಾರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ನೀಡಲಿಲ್ಲ. ಆದ್ರೆ ಮೋಕ್ಷಿತಾ ತನ್ನದೇ ರೀತಿಯಲ್ಲಿ ಉತ್ತರವನ್ನು ಕಂಡುಹಿಡಿದಿದ್ದಾರೆ ಅದನ್ನು ಚೆಂಡಿನ ಆಟದ ನಂತರ ಬ್ಲಾಸ್ಟ್ ಮಾಡಿದ್ದಾರೆ.
ಗೌತಮಿ ಜಾದವ್ ಅಂತೂ ತೂಂಬಾ ಟೆರರ್ ಆಗಿದ್ದಾರೆ. ಆಟವಾಡುವಾಗ ಯಾವ ಗೆಳೆತನವನ್ನೂ ನೋಡುವುದಿಲ್ಲ ಎಂದು ಮಂಜಣ್ಣ ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳಿದ್ದಾರೆ ಇದಕ್ಕೆ ಏನೂ ಉತ್ತರಿಸದೆ ಮಂಜಣ್ಣ ಮೌನವಾಗಿದ್ದಾರೆ.
ನಾನು ಬುದ್ದಿವಂತಿಕೆಯಿಂದ ಆಟವಾಡಿದ್ದೇನೆ.ಇದನ್ನು ಕೇಳಿದ ಗೌತಮಿ, ಮೋಕ್ಷಿತಾ, ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಅದೇ ಬೇಸರದಲ್ಲೇ ನಿದಾನವಾಗಿ ಚಪ್ಪಾಳೆ ಹೊಡೆದಿದ್ದಾರೆ.
ಈ ಚೆಂಡಿನ ಆಟ ಮನೆಯವರೆಲ್ಲರಿಗೂ ಬೇಸರವನ್ನು ತಂದಿದೆ ಎಂದು ಚೈತ್ರಾ ಕುಂದಾಪುರ ಅಸಮಾದಾನಗೊಂಡಿದ್ದಾರೆ.ಅನ್ಯಾಯದ ಆಟವನ್ನು ಆಡುತ್ತಿದ್ದಾರೆ ಎಂದು ಕೂಗಿ ಹೇಳಿದ್ದಕ್ಕೆ ಗಮನಿಸಿದ ಗೌತಮಿಯವರು ಹನುಮಂತನ ನಾಯಕತ್ವದಲ್ಲಿ ಅನ್ಯಾಯದ ಆಟಗಳು ನಡೆಯುತ್ತಿವೆ ಎಂದು ಆಕೋಶವನ್ನು ಹೊರಹಾಕಿದ್ದಾರೆ.
ಈ ಸಂದಿಗ್ಧ ಸ್ಥಿತಿಯನ್ನು ಕ್ಯಾಪ್ಟನ್ ಹನುಮಂತ ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಕಾದುನೋಡಬೇಕಾಗಿದೆ.