ಇತ್ತೀಚೆಗೆ ಶುರುವಾದ ಬಿಗ್‌ಬಾಸ್ ಹಲವು ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ.ಸ್ಪರ್ಧಿಗಳ ನಡುವೆ ಮಾತು, ಹರಟೆ, ಜಗಳ , ಮನಸ್ತಾಪ, ಕೋಪ, ಮುನಿಸು, ಇದೆಲ್ಲದರಿಂದಲೂ ಮೆಚ್ಚಗೆ ಮತ್ತು ಸಲಹೆಗಳೂ ನೋಡುಗರು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮತ್ತೊಬ್ಬ ಸ್ಪರ್ಧಿ ಆಗಮಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು ಆ ಸ್ಪರ್ಧಿ ಯಾರಿರಬಹುದು ಎಂದು ಎಲ್ಲರ ಮನಸಲ್ಲೂ ಪ್ರಶ್ನೆಗಳು ಎಳದೆ ಇರುವುದಿಲ್ಲ ಅದಕ್ಕೆ ಉತ್ತರ ಇಲ್ಲಿದೆ.
ಬಿಗ್‌ಬಾಸ್ ಮನೆಗೆ ಬರುವ ಹೊಸ ಅಥಿತಿ ಯಾರೆಂದರೆ ಅದಿತಿ ಮಿಸ್ತ್ರಿ ಎಂಬುವವರು ಬಿಗ್‌ಬಾಸ್ ಮನೆಗೆ ಬರುತ್ತಿರುವ ಮೂರನೇ ಸ್ಪರ್ಧಿ ಎಂದು ತಿಳಿದುಬಂದಿದೆ. ಇವರು ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿ ಆಗಿದ್ದಾರೆ ಎಂದು ತಿಳಿದುಬಂದಿದೆ.
ಅದಿತಿ ಮಿಸ್ತ್ರಿ ಗ್ಲಾಮರಸ್ ಆಗಿ ತುಂಬಾ ಬೋಲ್ಡ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದುಸಾಮಾಜಿಕ ಜಾಲಾತಾಣಗಳಲ್ಲಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ಗಳನ್ನು ಕೂಡ ಪಡೆದಿದ್ದಾರೆ.ಇನ್ಸ್ಟಾಗ್ರಾಂ ನಲ್ಲಿ 2.4 ಮಿಲಿಯನ್‌ಗಿಂತ ಹೆಚ್ಚು ಜನರು ಫಾಲೋವರ್ಸ್‌ಗಳು ಇದ್ದಾರೆ ಎನ್ನಲಾಗಿದೆ.
ಅದಿತಿ ಮಿಸ್ತ್ರಿ ತಮ್ಮ ಫಿಟ್ನೆಸ್ ವಿಚಾರದಿಂದಲೂ ಜನರ ಮನಸನ್ನು ಗೆದ್ದಿದ್ದಾರೆ.ಅವರ ಇನ್ಸ್ಟಾಗ್ರಾಂ ಪ್ರೋಪೈಲ್ ಪ್ರಕಾರ, ಅಧಿತಿ ಒಂದು ಅಪ್ಲಿಕೇಶನ್ ಹೊಂದಿರುವುದರಿಂದ ಅವರು ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಬಹುದಾಗಿದೆ.
ಇಷ್ಟೇ ಅಲ್ಲದೆ ವರದಿಗಳ ಪ್ರಕಾರ ಬಾಲಿವುಡ್ ನಟ ಸಾಹಿಲ್ ಖಾನ್‌ರವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇವರಿಬ್ಬರ ಪೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿವೆ.
ಅದಿತಿ ಹಾಗೂ ಸಾಹಿಲ್ ಬಹಳ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ವಿಚಾರ ಎಲ್ಲೂ ಪ್ರಸ್ಥಾಪವಾಗಿಲ್ಲ ಮತ್ತು ಅದಿತಿ ಎಂದಿಗೂ ಪಬ್ಲಿಕ್ ಮಾಡಿಕೊಂಡಿಲ್ಲ.
ಸದ್ಯ ಅದಿತಿ ಮಿಸ್ತ್ರಿ 24 ವರ್ಷದವರಾಗಿದ್ದು, ತಮ್ಮ ಕಾಲಿನ ಮೇಲೆ ತಾವೇ ನಿಂತುಕೊಂಡು ತಮ್ಮದೆ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.ಇವರು ಯಾವಾಗಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.ಆನ್‌ಲೈನ್ ಆರ್ಟ್ ಕೋರ್ಸನ್ನು ಆರಂಬಿಸಿದ್ದಾರೆ ಎನ್ನಲಾಗಿದೆ.