ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುರುವ  ರಿಯಾಲಿಟಿ ಶೋ ಬಿಗ್‌ಬಾಸ್‌11 , ನಾಲ್ಕು ವಾರಗಳನ್ನು ಪೂರೈಸಿದೆ.ಕಲೆದ ವಾರ ಕಿಚ್ಚ ಸುದೀಪ್ ಗೈರಾಗಿರುವ ಕಾರಣ ಪ್ರೇಕ್ಷಕರಲ್ಲಿ ಉತ್ಸಹಾವಿಲ್ಲದಾಗಿತ್ತು.ಈ ವಾರ ಕಿಚ್ಚ ಸುದೀಪ್‌ ಹಾಜರಾಗಿದ್ದು, ಕೆಲ ಸ್ಪರ್ಧಿಗಳಿಗೆ ಎಚ್ಚರಿಕೆಯನ್ನು ನೀಡಿ ವೈಲ್ಡ್‌ ಕಾರ್ಡ್‌ನಿಂದ ಪ್ರವೇಶ ಪಡೆದಿದ್ದ ಜಾನಪದ ಗಾಯಕ ಹನುಂಮಂತನಿಗೆ ಕಿಚ್ಚನ ಚರ್ಪಾಳೆ ಸಿಕ್ಕಿದೆ.

ಬಿಗ್‌ಬಾಸ್‌ 1ರಿಂದ 11 ರವರೆಗೂ ಹಲವಾರು ಲವ್‌ ಸ್ಟೋರಿಗಳು ನಡೆದಿವೆ.ಆದರೆ ಇಲ್ಲಿ ಒಬ್ಬರನ್ನು ಇಬ್ಬರು ಲವ್‌ ಮಾಡುವ ಪ್ರಸಂಗವನ್ನು ಕಿಚ್ಚ ಕ್ರಿಯೆಟ್‌ ಮಾಡಿದ್ದಾರೆ.ಇದೆನೆಂದರೆ ಒಬ್ಬರನ್ನೇ ಇಬ್ಬರು ಲವ್‌ ಮಾಡಬೇಕೆಂದು ಸುದೀಪ್‌ ತಿಳಿಸಿದ್ದಾರೆ. ಉಗ್ರಂ ಮಂಜು ಭವ್ಯ ತರಹ, ಹಾಗೇ ಧನರಾಜ್‌ಕೂಡಾ ಭವ್ಯಾ ರೀತಿಯಲ್ಲೇ ತ್ರಿವಿಕ್ರಮ್‌ರವರನ್ನು ಪ್ರೀತಿ ಮಾಡಬೇಕೆಂದು ಕಿಚ್ಚ ಕಾಮಿಡಿಯಾಗಿ ಹೇಳಿದ್ದಾರೆ. ಅವರ ಮಾತಿನಂತೆ ಧನರಾಜ್‌ ಮತ್ತು ಮಂಜು ಕಾಮಿಡಿ ಅಭಿನಯವನ್ನು ಮಾಡಿದ್ದು ತ್ರಿವಿಕ್ರಮ್‌ಗೆ ಕಾಟ ಕೊಟ್ಟಿದ್ದಾರೆ ಇದನ್ನು ನೋಡಿದ ಮನೆಯವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ತ್ರಿವಿಕ್ರಮ್‌ಗಾಗಿ  ಅವರಿಬ್ಬರು ಕಿತ್ತಾಡುವುದನ್ನು ನೋಡುವುದಕ್ಕೆ ಮಸ್ತ್‌ ಮಜವಾಗಿದೆ ಅದರ ನಡುವೆ ಧನರಾಜ್‌ ಇಲ್ಲಿಯವರೆಗೂ ನಾನು ಒಂದು ವಿಷಯ ಹೇಳಿರಲಿಲ್ಲ ಹೊಟ್ಟೆಯಲ್ಲಿ ಒಂದು ಮಗುವಿದೆ ಎಂದು ಕೂಡಲೇ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.ಇದನ್ನು ಕೇಳಿದ ತ್ರಿವಿಕ್ರಮ್‌ ಇದು ನಂದೇ ಎಂದು ಸುದೀಪ್‌ ಸಾರ್‌ಗೆ ಹೇಳಿದ್ದಾರೆ. ಇದಕ್ಕೆ ಟಾಂಗ್‌ ಕೊಟ್ಟಿರುವ ಕಿಚ್ಚ ಹೊಟ್ಟೆಯಲ್ಲಿ ಇರೋದು ನಂದೇ ಎಂದು ಕೈ ಎತ್ತಿದ್ರೀ. ಅದರೆ ಪಕ್ಕದಲ್ಲಿ ಹಿಡ್ಕೊಂಡಿರುವ ಕೈ ಮಾತ್ರ ಬಿಟ್ಟಿಲ್ಲ ಎಂದು ಹೇಳಿದ್ದಾರೆ.ಇದರಿಂದಾನೇ ತಿಳಿಯುತ್ತೆ ಇವತ್ತಿನ ವಾರದ ಕಥೆ ಕಿಚ್ಚನ ಜೊತೆಯ ಸಂಚಿಕೆ ತುಂಬಾ ಕಾಮಿಡಿ ಇರಲಿದೆ ಎನ್ನಲಾಗಿದೆ.

https://twitter.com/ColorsKannada/status/1852894213979193638

Leave a Reply

Your email address will not be published. Required fields are marked *